LATEST NEWS
ಬ್ಯಾಂಕ್ ಗಳ ನಕಲಿ ಪೋನ್ ಕಾಲ್ ನಂಬಿ ಓಟಿಪಿ ನೀಡಿ ಹಣ ಕಳೆದುಕೊಂಡ ಜನರು
ಮಂಗಳೂರು ನವೆಂಬರ್ 19: ಅದೆಷ್ಟು ಜನಜಾಗೃತಿ ಮೂಡಿಸಿದರು ಜನ ಮಾತ್ರ ಬ್ಯಾಂಕ್ ಕಾಲ್ ಗಳಿಂದ ಹಣ ಕಳೆದುಕೊಳ್ಳತ್ತಲೇ ಇದ್ದಾರೆ. ಮಂಗಳೂರಿನಲ್ಲಿ ಮತ್ತೆ ಒಂದೇ ದಿನ ಎರಡು ಪ್ರಕರಣ ಗಳು ದಾಖಲಾಗಿವೆ. ಎಸ್ ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾದ ಇಬ್ಬರು ಗ್ರಾಹಕರಿಗೆ ಕರೆ ಮಾಡಿದ ಅಪರಿಚಿತರು ಕ್ರೆಡಿಟ್ ಕಾರ್ಡ್ ನಂಬರ್ ಪಡೆದು ಹಣವನ್ನು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 17ರಂದು ಸಂಜೆ 5:44ಕ್ಕೆ ಎಸ್ ಬಿಐ ಗ್ರಾಹಕರೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಎಸ್ಬಿಐ ಕ್ರೆಡಿಟ್ ಕಾರ್ಡ್ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಕ್ರೆಡಿಟ್ ಕಾರ್ಡ್ ರಿಆಕ್ಟಿವೇಟ್ ಮಾಡುವುದಾಗಿ ತಿಳಿಸಿ ಕ್ರೆಡಿಟ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬ್ರ ಪಡೆದಿ ದ್ದಾರೆ. ಅಲ್ಲದೆ ಒಟಿಪಿ ನಂಬ್ರ ಪಡೆದು 80,000 ರೂ.ವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಅದೇ ದಿನ ಇನ್ನೊಂದು ಬ್ಯಾಂಕ್ ಆಫ್ ಬರೋಡಾದ ಗ್ರಾಹಕರೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಡೆಬಿಟ್ ಕಾರ್ಡನ್ನು ವಿಜಯಾ ಬ್ಯಾಂಕ್ನಿಂದ ಬ್ಯಾಂಕ್ ಆಫ್ ಬರೋಡಾಕ್ಕೆ ವರ್ಗಾವಣೆ ಮಾಡುವುದಾಗಿ ತಿಳಿಸಿ ಡೆಬಿಟ್ ಕಾರ್ಡ್ ನಂಬ್ರವನ್ನು ಪಡೆದು 73,182 ರೂ.ವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ.ಎರಡೂ ಪ್ರಕರಣ ದಾಖಲಿಸಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.