Connect with us

DAKSHINA KANNADA

ಮಂಗಳೂರು ಕದ್ರಿ ಪಾರ್ಕಿನಲ್ಲಿ “ಆಪರೇಷನ್ ಪೆರ್ಮರಿ”..!!!??

ಮಂಗಳೂರು: ಮಂಗಳೂರು ನಗರದ  ಕದ್ರಿ ಪಾರ್ಕಿನಲ್ಲಿ ‘ಅಪರೇಷನ್ ಪೆರ್ಮರಿ’ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಯಿತು. ಅಗ್ನ ಶಾಮಕ ದ್ಳ, ಪೊಲೀಸ್ ಸಿಬಂದಿ ಮತ್ತು ಉರಗ ತಜ್ಞರು ಈ ಕಾರ್ಯಾಚರಣೆಯ ಭಾಗವಾಗಿದ್ದರು.

ಆಪರೇಷನ್ ಪೆರ್ಮರಿ ಕಾರ್ಯಾಚರಣೆಯನ್ನು ಆಶ್ಚರ್ಯದಿಂದ ಜನರು ವೀಕ್ಷಿಸುತ್ತಿದ್ದರು. ಕದ್ರಿ ಪಾರ್ಕ್ ರಸ್ತೆ ಬದಿಯ ಮರವನ್ನೇರಿ ವಿರಾಮದಲ್ಲಿದ್ದ ಹೆಬ್ಬಾವೊಂದನ್ನು ಹಿಡಿಯಲು ಅಗ್ನಿ ಶಾಮಕ ಇಲಾಖೆ ಸಮೇತ ಸಿಬ್ಬಂದಿಗಳು “ಆಪರೇಷನ್ ಪೆರ್ಮರಿ” ನಡೆಸುತ್ತಿದ್ದರೆ ಅತ್ತ ಹೆಬ್ಬಾವಿನ ಜೊತೆ ಕದ್ರಿ ಪಾರ್ಕ್ ಗೆ ಸಂಬಂಧ ಪಟ್ಟ ಅಧಿಕಾರಿಗಳು ನಿದ್ದೆಯಲ್ಲಿದ್ದಿದು ಮೇಲ್ನೋಟಕ್ಕೆ ಕಾಣುತ್ತಿತ್ತು. ಸಾಮಾನ್ಯವಾಗಿ ಹೆಬ್ಬಾವುಗಳು ವಿರಾಮಕ್ಕೆ ಮರವನ್ನು ಆಶ್ರಯಿಸುವುದು ಸಾಮಾನ್ಯವಾದರೂ, ಜನ ನಿಬಿಡ ಪ್ರದೇಶ ಆಗಿರುವುದರಿಂದ ಎಚ್ಚರಿಕೆ ಅಗತ್ಯ. ಉರಗ ರಕ್ಷಕ ಭುವನ್ ಮತ್ತು ತಂಡ ಹಾವು ಹಿಡಿಯಲು ಹರ ಸಾಹಸ ಪಟ್ಟಿದ್ದಾರೆ. ಭುವನ್ ಬೃಹತ್ ಮರವನ್ನು ಅಗ್ನಿಶಾಮಕ ದಳದ ಏಣಿಯನ್ನೇರಿ ಹೆಬ್ಬಾವಿನ ಹಿಂದೆ ಬಿದ್ದಿದ್ದರು.

ಆಗ ಎಚ್ಚರಗೊಂಡ ಹಾವು ಕೊಂಬೆಯಿಂದ ಕೊಂಬೆಗೆ ನಿರಾಯಸವಾಗಿ ಹೋಗುತ್ತಿತ್ತು. ಮರದ ಕೊಂಬೆಯನ್ನು ಕಡಿಯಲು ಒಂದು ಕತ್ತಿಯ ವ್ಯವಸ್ಥೆಯು ಕದ್ರಿ ಪಾರ್ಕ್ ಕೆಲಸಗಾರರಲ್ಲಿ ಇಲ್ಲದೆ ಭುವನ್ ಕಷ್ಟ ಪಡಬೇಕಾಯಿತು. ಹಾವು ಎಚ್ಚರಗೊಂಡರೂ ಕದ್ರಿ ಪಾರ್ಕ್ ನ ಒಬ್ಬ ಅಧಿಕಾರಿಯೂ ಎಚ್ಚರ ಗೊಳ್ಳದೇ ಇರುವುದು ಕಂಡಾಗ ಇಲಾಖೆಯು ಯಾವ ಮಟ್ಟದಲ್ಲಿ ನಿದ್ದೆಯಲ್ಲಿ ಇದೆ ಎನ್ನುವುದಕ್ಕೆ ಉದಾಹರಣೆ. ಶನಿವಾರ ಮಧ್ಯಾಹ್ನ 3 ಮೂರು ಗಂಟೆಗೆ ಮರದಲ್ಲಿ ಕಂಡಿದ್ದ ಹೆಬ್ಬಾವನ್ನು ಕೆಳಗೆ ಇಳಿಸಲು ಕದ್ರಿ ಪಾರ್ಕ್ ಅಸೋಸಿಯೇಷನ್ ನ ಜಗನ್ನಾಥ ಗಾಂಬೀರ್ ಕಷ್ಟ ಬೀಳುತ್ತಿದ್ದದ್ದು ಕಂಡ ಬಂತು. ಕೊನೆಗೂ ಬಾನುವಾರ ಬೆಳಿಗ್ಗೆ 10.30ರ ವೇಳೆಗೆ ಭುವನ್ ಹಾವನ್ನು ಮರದಿಂದ ಕೆಳಗಿಳಿಸಿ ಚೀಲಕ್ಕೆ ತುಂಬಿಸಿ ” ಆಪರೇಷನ್ ಪೆರ್ಮರಿ” ಯಶಸ್ವಿಗೊಳಿಸಿದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *