LATEST NEWS
ಉಡುಪಿ ನಗರದಲ್ಲಿ ಹಾಡಹಗಲೇ ಕಾರಿನಲ್ಲಿ ರಾಸಲೀಲೆ.., ಹೊರಗೆ ಕಾರು ಅಲುಗಾಟ, ಒಳಗೆ ಜೋಡಿ ಕುಲುಕಾಟ..!!

ಉಡುಪಿ : ಉಡುಪಿಯಲ್ಲಿ ಹಾಡ ಹಗಲಲ್ಲೇ ಜೋಡಿಯೊಂದು ಕಾರಿನೊಳಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಘಟನೆ ವರದಿಯಾಗಿದೆ. ಕಾರಿನ ಅಲುಗಾಟ ನೋಡಿ ಹತ್ತಿರ ಹೋದ ಸ್ಥಳೀಯರಿಗೆ ಕಾರಿನಲ್ಲಿ ಜೋಡಿಯೊಂದು ಬೆತ್ತಲೆಯಾಗಿ ರಾಸಲೀಲೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದಿದೆ.
ನಗರದ ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರೇ ಹಾಡ ಹಗಲೇ ಈ ಘಟನೆ ನಡೆದಿದೆ. ಕಾರು ನಿಲುಗಡೆಗೊಳಿಸಿ ಕಾರಿನ ಗ್ಲಾಸುಗಳನ್ನು ಏರಿಸಿ ಒಳಭಾಗದಲ್ಲಿ ಯುವಕ ಯುವತಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು.

ಕಾರಿನ ಅಲುಗಾಟ ನೋಡಿದ ಸ್ಥಳಿಯರು ಹತ್ತಿರ ಹೋಗಿ ಕಾರಿನಲ್ಲಿ ಇನುಕಿ ನೋಡಿದಾಗ ಬೆತ್ತಲೆ ಜೋಡಿಯ ರಾಸಲೀಲೆಯ ದರ್ಶನವಾಗಿದೆ. ಸಾರ್ವಜನಿಕರನ್ನು ಕಂಡ ಯುವಕ ಮತ್ತು ಯುವತಿಯ ಜೋಡಿ ಕಾರನ್ನು ಅಲ್ಲೇ ಬಿಟ್ಟು ಅರೆಬರೆ ಬಟ್ಟೆಯಲ್ಲೇ ಪರಾರಿಯಾಗಿದ್ದಾರೆ. ಸ್ಥಳೀಯರ ಪ್ರಕಾರ ಕಾರು ಕಳೆದ ಒಂದು ವಾರದಿಂದ ಅನುಮಾನಸ್ಪದವಾಗಿ ನಿಲ್ಲುತ್ತಿತ್ತು ನಿತ್ಯ ಜೋಡಿ ಇಲ್ಲಿ ಬಂದು ರಾಲೀಲೆಯಲ್ಲಿ ತೊಡಗಿರುವ ಸಂಶಯ ವ್ಯಕ್ತವಾಗಿದೆ.