LATEST NEWS
ಕೇವಲ ಇಬ್ಬರು ಮಹಿಳೆಯರು ಮಾತ್ರ ಶಬರಿಮಲೆ ಪ್ರವೇಶ – ದೇವಸ್ವಂ ಸಚಿವ
ಕೇವಲ ಇಬ್ಬರು ಮಹಿಳೆಯರು ಮಾತ್ರ ಶಬರಿಮಲೆ ಪ್ರವೇಶ – ದೇವಸ್ವಂ ಸಚಿವ
ಕೇರಳ ಪೆಬ್ರವರಿ 4: ಸುಪ್ರೀಂಕೋರ್ಟ್ ನ ತೀರ್ಪಿನ ನಂತರ ವಿವಾದಿತ ವಯಸ್ಸಿನ ಕೇವಲ ಇಬ್ಬರು ಮಹಿಳೆಯರು ಮಾತ್ರ ಶಬರಿಮಲೆ ಪ್ರವೇಶಿಸಿದ್ದಾರೆ ಎಂದು ದೇವಸ್ವಂ ಸಚಿವ ಕಂಡಕಂಪಳ್ಳಿ ತಿಳಿಸಿದ್ದಾರೆ. ಈ ಮೂಲಕ ಕೇರಳ ಸರಕಾರ ಮತ್ತೆ ಸುಪ್ರೀಂಕೋರ್ಟ್ ಗೆ ತಪ್ಪು ಮಾಹಿತಿ ನೀಡಿದೆ.
ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಶಬರಿಮಲೆ ದೇಗುಲ ಪ್ರವೇಶಿಸಿದ್ದು ಕೇವಲ ಇಬ್ಬರು ಮಹಿಳೆಯರು ಮಾತ್ರ. ಈ ಹಿಂದೆ 17 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರಕಾರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
ಶಬರಿಮಲೆ ಎಕ್ಸಿಕ್ಯೂಟಿವ್ ಅಧಿಕಾರಿಯ ವರದಿ ಪ್ರಕಾರ ಶಬರಿಮಲೆ ದೇಗುಲದೊಳಗೆ ಪ್ರವೇಶಿಸಿದ್ದು ಇಬ್ಬರು ಮಹಿಳೆಯರು ಮಾತ್ರ ಎಂದು ದೇವಸ್ವಂ ಸಚಿವ ಕಂಡಕಂಪಳ್ಳಿ ಸುರೇಂದ್ರನ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಶ್ರೀಲಂಕಾ ಮೂಲದ ಮಹಿಳೆ ದೇವಾಲಯ ಪ್ರವೇಶಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಇಲ್ಲ ಸಚಿವರು ಹೇಳಿದ್ದಾರೆ.
ಈ ಮೊದಲು ಕೇರಳ ಸರಕಾರ ಸುಪ್ರೀಂಕೋರ್ಟ್ ಗೆ 51 ಮಂದಿ ವಿವಾದಿತ ವಯಸ್ಸಿನ ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ವರದಿ ನೀಡಿತ್ತು, ಅದರಲ್ಲಿ ಆ ಪಟ್ಟಿಯಲ್ಲಿ ಗಂಡಸರು ಸೇರಿದ್ದರಿಂದ ಪರಿಷ್ಕೃತ ವರದಿ ನೀಡಿ ಅದರಲ್ಲಿ ಕೇವಲ 17 ಮಹಿಳೆಯರು ಎಂದು ತಿಳಿಸಿತ್ತು. ಆದರೆ ಈಗ ದೇವಸ್ವಂ ಸಚಿವರ ಪ್ರಕಾರ ಕೇವಲ ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಾರೆ. ಆ ಬಗ್ಗೆ ಮಾತ್ರ ಸಾಕ್ಷ್ಯ ಇದೆ ಎಂದು ಹೇಳಿದ್ದಾರೆ.
ಶ್ರೀಲಂಕಾ ಮೂಲದ ಮಹಿಳೆ ಶಬರಿಮಲೆ ಪ್ರವೇಶದ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ ಎಂದು ಹೇಳುವ ಮೂಲಕ ಶ್ರೀಲಂಕಾ ಮಹಿಳೆ ಪ್ರವೇಶದ ಕುರಿತ ಮಾಹಿತಿ ಸುಳ್ಳು ಎಂದು ಹೇಳಿದ್ದಾರೆ.
ಶಬರಿಮಲೆಯ ಅರ್ಚಕರು ದೇವಸ್ವಂ ನೌಕರ ಅಲ್ಲ, ದೇವಸ್ವಂ ಕೈಪಿಡಿ ಪ್ರಕಾರ ಇನ್ನಿತರ ನೌಕರರಂತೆ ಶಬರಿಮಲೆ ಅರ್ಚಕರು ಕೆಲಸ ಮಾಡೇಬೇಕು. ದೇವಾಲಯದಲ್ಲಿ ಸಂಪ್ರದಾಯ ಉಲ್ಲಂಘನೆಯಾದರೆ ಬಾಗಿಲು ಮುಚ್ಚಿ ಶುದ್ಧಿ ಕೆಲಸ ಮಾಡಬೇಕೆಂದು ದೇವಸ್ವಂ ಕೈಪಿಡಿಯಲ್ಲಿ ಹೇಳಲಿಲ್ಲ. ಶುದ್ಧಿಕ್ರಿಯೆ ಅಗತ್ಯವಾದರೆ ದೇವಸ್ವಂ ಮಂಡಳಿ ಜತೆ ಸಮಾಲೋಚನೆ ನಡೆಸಿ ಅದನ್ನು ಮಾಡಬೇಕು. ಆದರೆ ಕಳೆದ ಬಾರಿ ಶುದ್ಧಿಕ್ರಿಯೆ ನಡೆಸಿದಾಗ ಈ ರೀತಿ ಅನುಮತಿ ಪಡೆದಿಲ್ಲ ಎಂದು ಸಚಿವರು ಹೇಳಿದ್ದಾರೆ.