Connect with us

LATEST NEWS

ಕನ್ಪರ್ಮ್ ಟಿಕೆಟ್ ಇದ್ರೆ ಮಾತ್ರ ರೈಲ್ವೆ ನಿಲ್ದಾಣದೊಳಗೆ ಎಂಟ್ರಿ – ರೈಲ್ವೆ ಇಲಾಖೆಯ ಹೊಸ ರೂಲ್ಸ್

ನವದೆಹಲಿ ಮಾರ್ಚ್ 10: ಪ್ರಮುಖ ಬೆಳವಣಿಗೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಹೊಸ ರೂಲ್ಸ್ ಒಂದನ್ನು ಪರಿಚಯಿಸಿದೆ. ಅದರ ಪ್ರಕಾರ ಪ್ರಯಾಣಿಕರು ರೈಲ್ವೆ ಪ್ರಯಾಣದ ಕನ್ಪರ್ಮ್ ಟಿಕೆಟ್ ಇದ್ದರೆ ಮಾತ್ರ ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸಲು ಅವಕಾಶ ಇದೆ. ಸದ್ಯ ದೇಶದ 60 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಈ ರೂಲ್ಸ್ ಜಾರಿಗೆ ತರಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.


ಶುಕ್ರವಾರ ಉನ್ನತ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ , ಭಾರಿ ಜನದಟ್ಟಣೆಯನ್ನು ಎದುರಿಸುವ ದೇಶದ ಪ್ರಮುಖ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿದರು. ಮೊದಲ ಹಂತವಾಗಿ  ನವದೆಹಲಿ ರೈಲು ನಿಲ್ದಾಣ (ದೆಹಲಿ), ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಮುಂಬೈ) , ಹೌರಾ ಜಂಕ್ಷನ್ (ಕೋಲ್ಕತ್ತಾ), ಚೆನ್ನೈ ಸೆಂಟ್ರಲ್ (ಚೆನ್ನೈ), ಬೆಂಗಳೂರು ನಗರ ರೈಲು ನಿಲ್ದಾಣ (ಬೆಂಗಳೂರು) ಸೇರಿದಂತೆ 60 ರೈಲ್ವೆ ನಿಲ್ದಾಣಗಳು ಸದ್ಯ ಹೊಸ ಪ್ರಯಾಣಿಕರ ನೀತಿಗೆ ಒಳಪಡಲಿದೆ.


ಭವಿಷ್ಯದಲ್ಲಿ ಜನಸಂದಣಿ ನಿಯಂತ್ರಣ ಅಗತ್ಯತೆಗಳ ಆಧಾರದ ಮೇಲೆ ಇತರ ಕೆಲವು ರೈಲು ನಿಲ್ದಾಣಗಳನ್ನು ಪಟ್ಟಿಗೆ ಸೇರಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮೊದಲಿಗೆ ಈ ಹೊಸ ರೂಲ್ಸ್ ರೈಲ್ವೆ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಲಿದ್ದು, ಆದರೆ ಭವಿಷ್ಯದಲ್ಲಿ ಇದು ಉಪಯೋಗಕ್ಕೆ ಬರಲಿದೆ ಎಂದು ಹೇಳಲಾಗಿದೆ. ಅಲ್ಲದೆ ಅತೀ ಹೆಚ್ಚು ಜನಸಂದಣಿ ಇರುವ ರೈಲ್ವೆ ನಿಲ್ದಾಣಗಳಲ್ಲಿ ಜನಸಂಚಾರ ನಿಯಂತ್ರಣಕ್ಕೆ ತರುವಲ್ಲಿ ಇದು ಪ್ರಮುಖವಾಗಲಿದೆ. ಹಬ್ಬದ ದಿನ ಹಾಗೂ ರಜಾ ದಿನಗಳಂದು ರೈಲ್ವೆ ನಿಲ್ದಾಣದಲ್ಲಿ ಜನದಟ್ಟಣೆ ಕಂಟ್ರೋಲ್ ಮಾಡಲು ಹೊಸ ರೂಲ್ಸ್ ಸಹಾಯಕವಾಗಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *