Connect with us

DAKSHINA KANNADA

‘ರಾಮ ಮಂದಿರ ಬಗ್ಗೆ ಕೆಲ ಅತೃಪ್ತ ಆತ್ಮಗಳು ಮಾತ್ರ ಮಾತನಾಡುತ್ತಿದ್ದು,ತಲೆ ಕೆಡಿಸಿಕೊಳ್ಳಬೇಡಿ ‘: ಜಗದೀಶ್ ಶೇಣವಾ..!

ಮಂಗಳೂರು : ರಾಮ ಮಂದಿರ ಬಗ್ಗೆ ಕೆಲ ಅತೃಪ್ತ ಆತ್ಮಗಳು ಮಾತನಾಡುತ್ತಿವೆ. ಪ್ರಚಾರಕ್ಕಾಗಿ ಕೆಲವರು ವಿರೋಧ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವಂತದ್ದೇನಿಲ್ಲ ಬಿಜೆಪಿ ವಕ್ತಾರ ಜಗದೀಶ್ ಶೇಣವಾ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶೇಣವಾ ಶ್ರೀ ರಾಮ ಜನ್ಮಸ್ಥಳ ಅಯೋಧ್ಯೆಯ ಮಂದಿರದಲ್ಲಿ ಜನವರಿ 22 ರಂದು ರಾಮಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದ್ದು ಈ ಐತಿಹಾಸಿಕ ದಿನವನ್ನು ನಾವೆಲ್ಲರೂ ರಾಷ್ಟ್ರೀಯ ಉತ್ಸವವಾಗಿ ಆಚರಿಸೋಣ ಎಂದು  ಕರೆ ನೀಡಿದ್ದಾರೆ. ಕೇಂದ್ರ ಈಗಾಗಲೇ ಮಧ್ಯಾಹ್ನವರೆಗೆ ರಜೆ ಸಾರಿದ್ದು, ರಾಜ್ಯ ಸರಕಾರವೂ ಸರಕಾರಿ ಸಂಸ್ಥೆ, ಶಿಕ್ಷಣ ಸಂಸ್ಥೆಗಳಿಗೆ ಜನವರಿ 22 ರಂದು ರಜೆ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು. ರಾಮ ಮಂದಿರಕ್ಕೆ ದೇಶಾದ್ಯಂತ ಭಕ್ತರಿಂದ 3200ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರಹವಾಗಿದೆ. ಈಗಾಗಲೇ ದೇಶಾದ್ಯಂತ ಅಯೋಧ್ಯೆಯಿಂದ ಬಂದಂತಹ ಅಕ್ಷತೆ ಹಾಗೂ ರಾಮನ ಫೋಟೋ ಹಂಚುವ ಕಾರ್ಯನೂ ಮುಗಿದಿದ್ದು ಮಹಾ ಉತ್ಸವಕ್ಕಾಗಿ ಅಂತಿಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕೇಂದ್ರ ಸರಕಾರ ಮಾತ್ರವಲ್ಲದೆ ರಿಲಯನ್ಸ್‌ ನಂತಹ ದೊಡ್ಡ ದೊಡ್ಡ ಕಂಪನಿಗಳು ಈ ದಿನ ರಜೆ ಸಾರಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಾರಸ್ಥರು ಅಂಗಡಿ-ಮುಂಗಟ್ಟು ಬಂದ್ ಮಾಡಿ ಈ ಮಹೋತ್ಸವದಲ್ಲಿ ಪಾಲ್ಗೊಳ್ಳೋಣ ಎಂದು ಮನವಿ ಮಾಡಿದರು.

ರಾಮ ಮಂದಿರ ಬಗ್ಗೆ ಕೆಲ ಅತೃಪ್ತ ಆತ್ಮಗಳು ಮಾತನಾಡುತ್ತಿವೆ. ಪ್ರಚಾರಕ್ಕಾಗಿ ಕೆಲವರು ವಿರೋಧ ಮಾಡುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವಂತದ್ದೇನಿಲ್ಲ. ರಾಮ ಪ್ರತಿಷ್ಠಾ ಮಹೋತ್ಸವವನ್ನು ದೇಶ-ವಿದೇಶಗಳಲ್ಲಿ ಆಚರಿಸುತ್ತಿದ್ದು, 55 ದೇಶಗಳಿಂದ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ. ಇದು ಈ ಉತ್ಸವದ ಹಿಂದಿರುವ ಮಹತ್ವ ಎಂದರು.

“ಚುನಾವಣೆ ವಿಚಾರ ಅಂತ ಕೆಲವರು ಹೇಳ್ತಾರೆ ನಾವು ರಾಜಕೀಯ ಲಾಭ ಮಾಡುತ್ತೀದ್ದೇ ಅಂತಾರೆ. ಆದ್ರೆ ನಾವು ರಾಜಕೀಯ ಮಾಡಿದ್ದಲ್ಲಿ ತಪ್ಪೇನಿಲ್ಲ, ಯಾಕೆಂದರೆ ಅದರಲ್ಲಿ ಆಗ ಅಡ್ವಾಣಿಯವರು ರಥಯಾತ್ರೆ ಮಾಡಿದ್ದರಿಂದ ಈ ಒಂದು ವಿಷಯಕ್ಕೆ ಇಷ್ಟೊಂದು ದೊಡ್ಡ ಪುಷ್ಟಿ ಸಿಕ್ಕಿತ್ತು. ಆಗ 2 ರಿಂದ 189 ಆಗಿದ್ದು ಆಯೋದ್ಯೆ ಯಿಂದಲೇ ಈಗಲೂ ನಾವು ಹೆಮ್ಮೆಯಿಂದ ಹೇಳುತ್ತೇವೆ. ಅದರ ಲಾಭ ಪಡೆದರೆ ಯಾರು ಅದರ ನೋವನ್ನು ಅನುಭವಿಸಿದ್ದಾರೆ ಅದರ ಲಾಭ ಪಡೆಯೋದರಲ್ಲಿ ತಪ್ಪೇನಿಲ್ಲ. ನೋವನ್ನು ಅನುಭವಿಸಿದವ ಅದಕ್ಕೆ ಒಳ್ಳೆಯದಾಗುವಾಗ ಅದರ ಸುಖವನ್ನು ಅನುಭವಿಸಬಾರದಂತ ಏನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ರವಿ ಶಂಕರ್ ಮಿಜಾರ್, ಜಿಲ್ಲೆಯ ಪ್ರಧಾನ‌ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷರಾದ ಪ್ರಭಾ ಮಾಲಿನಿ, ಜಿಲ್ಲಾ ವಕ್ತರಾದ ರಾಧಕೃಷ್ಣ, ರಂದೀಪ್ ಕಾಂಚನ್ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *