ಮಂಗಳೂರು ಫೆಬ್ರವರಿ 11: ಹಣ ಮಾಡುವ ಆಸೆಗೆ ಬಿದ್ದು ವ್ಯಕ್ತಿಯೊಬ್ಬ ನಕಲಿ ಆನ್ಲೈನ್ ಟ್ರೆಡಿಂಗ ಮಾಡಿ ಬರೋಬ್ಬರಿ 13 ಲಕ್ಷ ಕಳೆದುಕೊಂಡ ಘಟನೆ ನಡೆದಿದ್ದು, ಹಣ ಕಳೆದುಕೊಂಡ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರುದಾರ ಅನ್ ಲೈನ್ ಟ್ರೇಡಿಂಗ್ ಮಾಡುವ ಸಮಯ ಸೆಪ್ಟೆಂಬರ್ 2ನೇ ತಾರೀಕು 2025ರಂದು ಮೊಬೈಲ್ ನಂಬರಿನ ವಾಟ್ಸಪ್ಗೆ ಪ್ರವೀಣ್ ಪಟೇಲ್ ಎಂಬ ವ್ಯಕ್ತಿಯ B-53 WEALTH ACADEMY ಎಂಬ ವಾಟ್ಸಪ್ ಗ್ರೂಪಿನಿಂದ ಸಂದೇಶ ಕಳುಹಿಸಿ, ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿ ದಿನಂಪ್ರತಿ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು.
ಅದರಂತೆ 17-9-2025ರಂದು ಆತನ (ಪ್ರವೀಣ್ ಪಟೇಲ್) ಹೂಡಿಕೆ ಪಯಣದ ಬಗ್ಗೆ ತಿಳಿಸುತ್ತಾ, ಲಾಭ ನಷ್ಟಗಳು ಹಾಗೂ ಹೂಡಿಕೆಯ ಪ್ರಯೋಜನಗಳನ್ನು ತಿಳಿಸುತ್ತಿದ್ದರು. ಶೇರು ಮಾರುಕಟ್ಟೆಯಲ್ಲಿ QIB ಮೂಲಕ ಹೂಡಿಕೆ ಮಾಡಲು TENCORE ಎಂಬ ಸಂಸ್ಥೆಯ ಮೂಲಕ ಖಾತೆ ತೆರೆಯಬೇಕಾಗುವುದು. ಅದಕ್ಕೆ ಸಹಕರಿಸಲು CHRIS HARPER ಎನ್ನುವ ವ್ಯಕ್ತಿಗೆ ಸಂಪರ್ಕಿಸಲು ಆತನ ಮೊಬೈಲ್ ನಂಬರ್ +1(307)2203619 ಅನ್ನು ನೀಡಿರುತ್ತಾನೆ. ಆನಂತರ ಶುರುವಿಗೆ ರೂ. 50000/- ದಿಂದ ಪ್ರಾರಂಭಿಸಲು ಹೇಳಿರುತ್ತಾನೆ. ಹಾಗೇ ದಿನಾಂಕ 6-10-2025 ರಂದು ಅವನು ನೀಡಿದ RAJ TRADERS ಎಂಬ ಹೆಸರಿನ C/Aಖಾತೆ ಸಂಖ್ಯೆ – 51320200000266 BANK OF BARODA JUNAGARH ORISSA ದ ಖಾತೆಗೆ 50,000/- ಮೊತ್ತವನ್ನು ವರ್ಗಾಯಿಸಿರುತ್ತೇನೆ. ನನಗೆ ಎರಡು ದಿನದಲ್ಲಿ ಸುಮಾರು ರೂ. 6,500/- ಲಾಭ ಬಂದಿರುತ್ತದೆ. ಅದರಲ್ಲಿ ನಾನು ರೂ. 1500 ಹಣವನ್ನು ವಾಪಾಸು ತೆಗೆಯಲು ಹಾಕಿದೆ. ಒಂದು ಘಂಟೆಯಲ್ಲಿ ನನ್ನ ಖಾತೆಗೆ ಹಣ ಬಂದಿರುತ್ತದೆ. ದಿನಾಂಕ 19-10-2025ರಂದು ಮತ್ತೆ CHRIS HAPER ಎನ್ನುವ ವ್ಯಕ್ತಿಯನ್ನು ಸಂಪರ್ಕಿಸಿ ಆತ ನೀಡಿದ BANDHAN BANK ಬಿಜನೂರು ಬ್ರಾಂಚಿನ ಖಾತೆ ಸಂಖ್ಯೆ – 10200002985581 ಗೆ ರೂ. 1,00,000/- ಮೊತ್ತವನ್ನು ವರ್ಗಾಯಿಸಿರುತ್ತೇನೆ. ಅದರ REFERENCE ಸಂಖ್ಯೆ – 000041604592. ಒಟ್ಟು 1,55,000/- ಮೊತ್ತದಲ್ಲಿ ಪ್ರವೀಣ್ ಪಟೇಲ್ ಎನ್ನುವ ವ್ಯಕ್ತಿಯ ಸಲಹೆಯ ಮೇರೆಗೆ ಟ್ರೇಡಿಂಗ್ ಮಾಡಿ ನನ್ನ ಮೊತ್ತವನ್ನು ರೂ. 1,70,000/- ಲಾಭದೊಂದಿಗೆ ಒಟ್ಟು ರೂ. 3,25,000 ಮಾಡಿರುತ್ತೇನೆ. ನನಗೆ 182 ಶೇರುಗಳಿಗೆ ಹೂಡಿಕೆ ಮಾಡಲು ಅವಕಾಶವಿದ್ದು ನನ್ನ ಇರುವ ಹಣದಲ್ಲಿ ಅದಕ್ಕೆ ವಿನಿಯೋಗಿಸಿರುತ್ತೇನೆ.ಆದರೆ ಆತ ಜಾಸ್ತಿ ಶೇರುಗಳಿಗೆ ವಿನಿಯೋಗಿಸಲು ಬಲವಂತ ಪಡಿಸಿರುತ್ತಾನೆ. ಆದರೂ ನನ್ನ ಖಾತೆಯಲ್ಲಿ ಇರುವ ಹಣವನ್ನು ವಿನಿಯೋಗಿಸಲು ಹೋದಾಗ ತಾಂತ್ರಿಕ ದೋಷಗಳಿಂದ ಎರಡು ಪಟ್ಟು ಹೆಚ್ಚು ಅನ್ವಯವಾಯಿತು. ಆಗ ನಾನು ಭರಿಸಬೇಕಾದ ಮೊತ್ತ ರೂ. 3,69,096/- ಮಾತ್ರ. ಆದರೆ ನಾನು ಅನ್ವಯಿಸಿದಕ್ಕಿಂತಲೂ ಎರಡು ಪಟ್ಟು ಹೆಚ್ಚು ಶೇರುಗಳ ಹಂಚಿಕೆಯಾಯಿತು. ದಿನಾಂಕ 20-10-2025 ರಂದು ನನಗೆ ಆಪ್ ನಲ್ಲಿ ತೋರಿಸಿದ ಮೊತ್ತ ರೂ. 1,07,000/- ಜಮೆ ಮಾಡಲು ಹೇಳಿದಾಗ ಆತನು ಹೇಳಿದ ಖಾತೆಗೆ 1,07,000/- ಮೊತ್ತವನ್ನು ವರ್ಗಾಯಿಸಿರುತ್ತೇನೆ. ದಿನಾಂಕ 22-10-2025ರಂದು ನಾಯಪಲ್ಲಿ ಬ್ರಾಂಚಿನ, (BHUVANESHWAR), HIFERK TECHNOLOGIES ಹೆಸರಿನ ಖಾತೆ ಸಂಖ್ಯೆ 27650200000912 ಗೆ ರೂ. 3,04,000/- ವರ್ಗಾಯಿಸಿರುತ್ತೇನೆ. ದಿನಾಂಕ 24-10-2025 ರಂದು MIDWEST ಶೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಶುರು ಆದಾಗ ಶೇ. 300 ರಷ್ಟು ಲಾಭಾಂಶ ತೋರುತ್ತಿತ್ತು. ಆದರೆ ನನ್ನಲ್ಲಿ ಇದ್ದ ಷೇರನ್ನು ಮಾರಲು ಅನಮತಿ ನೀಡದೆ ಇದ್ದಾಗ ನಾನು ಮತ್ತೆ ನನ್ನ ಕದ್ರಿಯ HDFC ಖಾತೆ ಯಿಂದ UPI ಮೂಲಕ ಆತ ನೀಡಿದ BARNALI ASSOCIATES ಹೆಸರಿನ ಖಾತೆ ಸಂಖ್ಯೆ 20100043689891 ಗೆ ರೂ. 1,00,000/- ವರ್ಗಾಯಿಸಿರುತ್ತೇನೆ. ಮತ್ತು ಅದೇ ಖಾತೆಯಿಂದ RTGS ಮೂಲಕ ಆತನ ಅದೇ ಖಾತೆಗೆ ಮತ್ತೆ ರೂ. 3,07,000/- ವರ್ಗಾಯಿಸಿರುತ್ತೇನೆ. ಅಷ್ಟೆಲ್ಲ ಹಣ ವರ್ಗಾವಣೆ ಆದರೂ ಕೂಡ ಮತ್ತೆ ಆಪ್ ನಲ್ಲಿ ರೂ. 4,04,586 /- ವರ್ಗಾವಣೆಗೆ ಕೇಳುತ್ತಿತ್ತು. CHRIS HARPER ಹಾಗೂ ಪ್ರವೀಣ್ ಪಟೇಲ್ ಅವರಲ್ಲಿ ಹೇಳಿದಾಗ ಅವರು ಹಣ ವರ್ಗಾವಣೆ ಮಾಡಲು ಹೇಳಿರುತ್ತಾರೆ. ಇಲ್ಲದಿದ್ದಲ್ಲಿ ನಿಮ್ಮ ಶೇರನ್ನು ಮಾರಲು ಅವಕಾಶ ಕೊಡುವುದಿಲ್ಲ ಹಾಗು ಸೆಬಿಯಿಂದ ನೋಟೀಸು ಜಾರಿಯಾಗುತ್ತದೆ ಎಂದು ಬೆದರಿಸಿರುತ್ತಾರೆ. ಅದೇ ರೀತಿ 27-10-2025ರಂದು 2ನೇ ದಿನ ಅದರ ಲಾಭ ಶೇ. 200ರಷ್ಟು ಸಿಗುತ್ತದೆ ಎಂದು ಆಮಿಷ ಒಡ್ಡಿರುತ್ತಾನೆ. ಮೊದಲು ಮಾಡಿದ ಹೂಡಿಕೆಯ ಹಣವನ್ನು ವಾಪಾಸು ಪಡೆಯುವ ಸಲುವಾಗಿ 27-10-2025ರಂದು ಸುರತ್ಕಲ್ ನ ಭಾರತ್ ಬ್ಯಾಂಕಿರಿಂದ ಆತ ನೀಡಿದ ಮುಂಬೈಯ ಚೆಂಬೂರು ಬ್ರಾಂಚಿನ BANK OF BARODA, S.K.ENTERPRISE ಹೆಸರಿನ ಖಾತೆ ಸಂಖ್ಯೆ 06690200001519 ಗೆ ಮೂಲಕ ರೂ. 4,04,586 ಮೊತ್ತವನ್ನು ವರ್ಗಾಯಿಸಿರುತ್ತೇನೆ. ಇದಾದ ನಂತರ ಬೆಳಿಗ್ಗೆ 9 ಘಂಟೆಗೆ ಶೇರು ಮಾರುಕಟ್ಟೆ ತೆರೆದಾಗ ನನ್ನ ಹೂಡಿಕೆ ಮಾಡಿದ ಎಲ್ಲ ಶೇರುಗಳ ಮೊತ್ತ ರೂ. 13,72,586/- ಆಗಿತ್ತು ನಾನು ಶೇ. 200 ಲಾಭ ಬಂದ ಕೂಡಲೇ ಎಲ್ಲವನ್ನು ಮಾರಿದಾಗ ರೂ. 42,00,000 ತೋರಿಸುತಾ ಇತ್ತು. ನಂತರ ನಾನು ಹಾಕಿದ ರೂ. 13,72,586 /- ಹಣವನ್ನು ವಾಪಾಸು ಪಡೆಯಲು ಬೇಡಿಕೆ ಇಟ್ಟಾಗ ಅದು ಶೇ. 38 ತೆರಿಗೆ ಹಣ ಪಾವತಿ ಮಾಡಬೇಕು ಇಲ್ಲದಿದ್ದಲ್ಲಿ ಹಣ ವಾಪಾಸು ಪಡೆಯಲು ಆಗುವುದಿಲ್ಲ ಎಂಬುದಾಗಿ ಕಾರಣ ನೀಡಿ ಹಣವನ್ನು ಕೊಡದೇ ಮೋಸ ಮಾಡಿದ್ದಾರೆ.