ಕುಂದಾಪುರ ಫೆಬ್ರವರಿ 24: ಅಪರಿಚಿತರೊಬ್ಬರ ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ಆನ್ಲೈನ್ ಟಾಸ್ಕ್ ಗೆ ಹಣ ಹೂಡಿಕೆ ಮಾಡಿ ವ್ಯಕ್ತಿಯೊಬ್ಬರು ಬರೋಬ್ಬರಿ 5 ಲಕ್ಷ ಕಳೆದುಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ,.
ಪರಶುರಾಮ್ ಲಮಾಣಿ (29) ಕಾಗಿಹಾಳೆ ತಾಂಡೆ ಸವದತ್ತಿ ಬೆಳಗಾವಿ ಇವರಿಗೆ ದಿನಾಂಕ: 18-02-2026 ರಂದು ಕಾವೇರಿ ಎಂಬವರು ಕರೆ ಮಾಡಿ https://alliidy.com ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ ಟಾಸ್ಕ ನಲ್ಲಿ ಭಾಗವಹಿಸಿ ಅದರಿಂದ ನನಗೆ ಲಾಭ ಬಂದಿರುವುದಾಗಿ ತಿಳಿಸಿದ್ದಾರೆ.

ಇದನ್ನೆ ನಂಬಿದ ಪರುಶುರಾಮ್ 19-02-2026 ರಂದು 200000/- ರೂಪಾಯಿಯನ್ನು RTGS ಮೂಲಕ ಗುಲಾಮ್ ಹುಸೈನ್ ಎಂಬವರ ಖಾತೆಗೆ ಹಣ ಹಾಕಿರುತ್ತಾರೆ, ಮತ್ತು ದಿನಾಂಕ 20-02-2026 ರಂದು ಬ್ಯಾಂಕ್ ಖಾತೆ ನಂಬ್ರ 240000/- ರೂಪಾಯಿ ಹಣವನ್ನು RTGS ಮೂಲಕ ಮೋನು ಯಾದವ್ ಎಂಬವರ ಖಾತೆಗೆ ಹಾಕಿರುತ್ತಾರೆ. ದಿನಾಂಕ 20-02-2026 ರಂದು 99,200 ರೂಪಾಯಿ ಹಣವನ್ನು RTGS ಮೂಲಕ ಕುಲದೀಪ್ ಎಂಬವರ ಖಾತೆಗೆ ಹಣವನ್ನು ಹಾಕಿರುತ್ತಾರೆ. ಈ ರೀತಿಯಲ್ಲಿ ಪಿರ್ಯಾದಿದಾರರ ಖಾತೆಯಲ್ಲಿದ್ದ ಒಟ್ಟು ಸುಮಾರು 539200/- ರೂಪಾಯಿ ಹಣವನ್ನು ಇನ್ವೆಸ್ಟ್ ಮಾಡಿದ್ದಾರೆ.
ಬಳಿಕ ಸೈಬರ್ ವಂಚಕರು ಯಾವುದೇ ಲಾಭವನ್ನು ನೀಡಿದೆ ಪರುಶುರಾಮ್ ಅವರ ಹಾಕಿರುವ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 16/2026 ಕಲಂ: 318(4) BNS & U/S 66 (C) 66 (D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.