LATEST NEWS
ಸ್ನಾಪ್ ಡೀಲ್ ಸಂಸ್ಥೆಯ ಹೆಸರು ಬಳಸಿ ಆನ್ ಲೈನ್ ದೋಖಾ
ಸ್ನಾಪ್ ಡೀಲ್ ಸಂಸ್ಥೆಯ ಹೆಸರು ಬಳಸಿ ಆನ್ ಲೈನ್ ದೋಖಾ
ಪುತ್ತೂರು ಫೆಬ್ರವರಿ 4: ಯುವಕನೊಬ್ಬನಿಗೆ ಸುಮಾರು ಎಂಟುವರೆ ಲಕ್ಷ ರೂಪಾಯಿ ಮೌಲ್ಯದ ಕಾರು ಆಫರ್ ಬಂದಿದೆ. ಆನ್ ಲೈನ್ ಶಾಂಪಿಂಗ್ ನಲ್ಲಿ ಹೆಸರುವಾಸಿಯಾದ ಸ್ನಾಪ್ ಡೀಲ್ ಹೆಸರಿನಲ್ಲಿ ಈ ಆಫರ್ ಬಂದಿದ್ದು, ಹರಿಯಾಣ ಮೂಲದಿಂದ ಕರೆ ಮಾಡಿರುವ ವ್ಯಕ್ತಿ ತಾನು ಅರುಣ ಎಂದು ಪರಿಚಯಿಸಿಕೊಂಡಿದ್ದಾನೆ.
ಬಳಿಕ ಯುವಕನ ವಾಟ್ಸಪ್ ಸಂಖ್ಯೆಗೆ ತನ್ನ ಆಧಾರ್ ಕಾರ್ಡ್,ಪಾನ್ ಕಾರ್ಡ್,ಸ್ನಾಪ್ ಡೀಲ್ ಸಂಸ್ಥೆಯ ಐಡಿಯನ್ನು ಕಳುಹಿಸಿದ್ದು, ಕೆಲವು ಲಿಂಕ್ ಒಪನ್ ಮಾಡಿದರೂ ಸ್ನಾಪ್ ಡೀಲ್ ಅಧಿಕೃತ ಮಾಹಿತಿ ಎಂದು ನಂಬಿಸುವ ಮಟ್ಟದಲ್ಲಿ ಈ ಕಳ್ಳರ ಕರಾಮತ್ತು ನಡೆಸಿದ್ದಾರೆ.
ಕಾರು ಖರೀದಿಸುವುದು ಕಷ್ಟವಾದಲ್ಲಿ ಮೊತ್ತವನ್ನು ನೀಡುವುದಾಗಿ ಸಂತೋಷ್ ಎಂಬವರ ಹೆಸರಿಗೆ ಎಂಟು ಲಕ್ಷ ರೂ ಚೆಕ್ ಬರೆದು ತೋರಿಸಿದ್ದಾನೆ.ಆರಂಭದಲ್ಲಿ ಎಂಟು ಸಾವಿರ ರೂಪಾಯಿಯನ್ನು ಅವರು ನೀಡಿದ ಖಾತೆಯೊಂದಕ್ಕೆ ಜಮೆ ಮಾಡುವಂತೆ ಕರೆ ಮಾಡಿದ ಅನಾವಿಕ ವ್ಯಕ್ತಿ ತಿಳಿಸಿದ್ದು, ಅನುಮಾನವಿದ್ದರೆ ಪೋಲಿಸ್ ಠಾಣೆಗೆ ಹೋಗಿ ಪೋಲಿಸರಿಗೇ ಪೋನ್ ಕೊಡಿ ನಾನು ಮಾತನಾಡುತ್ತೇನೆ ಎನ್ನುವ ಮಟ್ಟಕ್ಕೆ ಈ ಜಾಲ ಬೆಳೆದುನಿಂತಿದೆ.