LATEST NEWS
ಎಟಿಎಂ ಕಾರ್ಡ್ ಮಾಹಿತಿ ನೀಡಿ 50 ಸಾವಿರ ಕಳೆದುಕೊಂಡ ಮಾಜಿ ಶಾಸಕ ಜೆ.ಆರ್ ಲೋಬೋ

ಎಟಿಎಂ ಕಾರ್ಡ್ ಮಾಹಿತಿ ನೀಡಿ 50 ಸಾವಿರ ಕಳೆದುಕೊಂಡ ಮಾಜಿ ಶಾಸಕ ಜೆ.ಆರ್ ಲೋಬೋ
ಮಂಗಳೂರು ಜುಲೈ 06: ಬುದ್ದಿವಂತರ ಜಿಲ್ಲೆಯಂದೇ ಕರೆಯಲ್ಪಡುವ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಅನಾಮಧೇಯ ಕರೆಗಳಿಂದ ಹಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಈ ರೀತಿ ಸೈಬರ್ ಕ್ರೈಂ ಗೆ ಒಳಗಾಗುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಾರಿ ಮೊಸ ಹೋಗುವ ಸರದಿ ಮಂಗಳೂರಿನ ಮಾಜಿ ಶಾಸಕ ಜೆ.ಆರ್ ಲೋಬೋ ಅವರದ್ದು.
ಮಾಜಿ ಶಾಸಕ, ಅಲ್ಲದೇ ಮಾಜಿ ಕೆಎಎಸ್ ಅಧಿಕಾರಿಯಾಗಿರುವ ಜೆ.ಆರ್ ಲೋಬೋ ಅವರೇ ಈ ಬಾರಿ ಮೋಸ ಹೋಗಿ ಸುಮಾರು 50 ಸಾವಿರ ರೂಪಾಯಿ ಕಳೆದುಕೊಂಡಿರುವದು ಈಗ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.

ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೋ ಅವರ ಮೊಬೈಲ್ ಕರೆ ಮಾಡಿದ ಚಾಲಾಕಿ ಖದೀಮರು ಲೋಬೊ ಅವರಿಂದ ಎ ಟಿ ಎಂ ಕಾರ್ಡ್ ನ ವಿವರ ಪಡೆದು ಹಣ ಲಪಟಾಯಿಸಿದ್ದಾರೆ. ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆಮಾಡಿರುವುದಾಗಿ ಪರಿಚಯಿಸಿಕೊಂಡ ಖದೀಮರು, ನಿಮ್ಮ ಎ ಟಿ ಎಂ ಕಾರ್ಡ್ ನ ಕೀ ವಿವರ ನೀಡಿಲ್ಲ ಈ ಕಾರಣ ನಿಮ್ಮ ಎ ಟಿ ಎಂ ಕಾರ್ಡ್ ನ್ನು ಬ್ಲಾಕ್ ಮಾಡುವುದಾಗಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ದೂರವಾಣಿ ಕರೆಯನ್ನು ನಂಬಿದ ಮಾಜಿ ಶಾಸಕ ಜೆ ಆರ್ ಲೋಬೊ ತಮ್ಮ ಉಳಿತಾಯ ಖಾತೆಯ ಎ ಟಿ ಎಂ ಕಾರ್ಡ್ ನ , ಓ ಟಿ ಪಿ ನಂಬರ್ ಅನ್ನು ಕರೆಮಾಡಿದ ಖದೀಮರಿಗೆ ನೀಡಿದ್ದಾರೆ. ಈ ಪರಿಣಾಮ ಕ್ಷಣ ಮಾತ್ರದಲ್ಲಿ ಲೋಬೊ ಅವರ ಖಾತೆಯಿಂದ 50 ಸಾವಿರ ರೂಪಾಯಿ ಯನ್ನು ಖದೀಮರು ಎಗರಿಸಿದ್ದಾರೆ. ಮೂದಲು 25 ಸಾವಿರ ರೂಪಾಯಿ ನಂತರ 19,999 ಹಾಗು 5 ಸಾವಿರ ದಂತೆ ಲೋಬೊ ಅವರ ಖಾತೆಯಿಂದ ಹಣ ತೆಗೆಯಲಾಗಿದೆ.
ವಂಚನೆ ಗೊಳಗಾಗಿರುವುದನ್ನು ಅರಿತ ಮಾಜಿ ಶಾಸಕ ಜೆ ಆರ್ ಲೋಬೊ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐ ಟಿ ಆಕ್ಟ್ ನಡಿ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖದೀಮರು ಆನ್ ಲೈನ್ ಖರೀದಿ ಮಾಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.