DAKSHINA KANNADA
ಪ್ರವೀಣ್ ನೆಟ್ಟಾರು ಹತ್ಯೆ ನಡೆದು ಇಂದಿಗೆ ವರ್ಷ: ಸುಳ್ಯ ಬಿಜೆಪಿ ಮಂಡಲದಿಂದ ರಕ್ತದಾನ ಶಿಬಿರ
ಪುತ್ತೂರು, ಜುಲೈ 26: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದು ಇಂದಿಗೆ ವರ್ಷ ಕಳೆದಿದೆ. ಸುಳ್ಯ ಬಿಜೆಪಿ ಮಂಡಲ ಪ್ರವೀಣ್ ಸಂಸ್ಮರಣಾರ್ಥ ರಕ್ತದಾನ ಶಿಬಿರ ಆಯೋಜಿಸಿದೆ.
ಬೆಳ್ಳಾರೆಯಲ್ಲಿರುವ ಪ್ರವೀಣ್ ನೆಟ್ಟಾರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಕ್ತದಾನ ಶಿಬಿರಕ್ಕೆ ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯರಿಂದ ಚಾಲನೆ ನೀಡಿದ್ದಾರೆ. ಪ್ರವೀಣ್ ಕುಟುಂಬಕ್ಕೆ ಬಿಜೆಪಿ ಪಕ್ಷ, ಹಿಂದೂ ಸಂಘಟನೆಗಳು ಎಲ್ಲಾ ರೀತಿಯ ನೆರವು ನೀಡಿದೆ.
ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಮಾಧ್ಯಮ ಜೊತೆ ಮಾತಾಡಿ, ಬಿಜೆಪಿ, ಸಂಘಟನೆಗಳು ಪ್ರವೀಣ್ ನನ್ನು ತಮ್ಮ ಮನೆ ಮಗನಾಗಿ ನೋಡಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರವೀಣ್ ನ ಕನಸಿನ ಮನೆ ನಿರ್ಮಿಸಲಾಗಿದೆ. ಸಂಘ ಪರಿವಾರ, ಬಿಜೆಪಿ ಮುಖಂಡರು ನಿರಂತರವಾಗಿ ನಮ್ಮ ಜೊತೆ ನಿಂತಿದ್ಧಾರೆ. ಮುಂದೆಯೂ ನಮ್ಮ ಜೊತೆ ನಿಲ್ಲುತ್ತಾರೆ ಎನ್ನುವ ವಿಶ್ವಾಸವಿದೆ
ಪ್ರವೀಣ್ ಹತ್ಯೆ ಪ್ರಕರಣವನ್ನು ಕೇಂದ್ರ ಸರಕಾರ ವಿಶೇಷ ಮುತುವರ್ಜಿಯಿಂದ ಎನ್‌ಐಎ ತನಿಖೆಗೆ ವಹಿಸಿದೆ. ಎನ್ಐಎ ಬಹಳ ಉತ್ತಮ ರೀತಿಯಲ್ಲಿ ತನಿಖೆ ಮಾಡುತ್ತಿದೆ. ಪ್ರಕರಣವನ್ನು ಒಂದು ಉತ್ತಮ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಪ್ರವೀಣ್ ಬಲಿದಾನ ವ್ಯರ್ಥವಾಗಬಾರದು ಎಂದು ಪ್ರವೀಣ್ ಪತ್ನಿ ನೂತನ ಕುಮಾರಿ ಹೇಳಿದ್ದಾರೆ.