Connect with us

LATEST NEWS

ಒಂದು ದೇಶ ಒಂದು ರೇಶನ್ ಕಾರ್ಡ್

ಒಂದು ದೇಶ ಒಂದು ರೇಶನ್ ಕಾರ್ಡ್

ಮಂಗಳೂರು ಮಾರ್ಚ್ 23: ದೇಶದಾದ್ಯಂತ ಇನ್ನು ಮುಂದೆ ಒಂದೇ ರೇಷನ್ ಕಾರ್ಡ್ ತರಲು ಕೇಂದ್ರ ಸರಕಾರ ಮುಂದಾಗಿದೆ. ನಕಲಿ ಪಡಿತರ ಚೀಟಿಗೆ ಕಡಿವಾಣ ಹಾಕುವ ಉದ್ದೇಶದ ಜೊತೆಗೆ ರಕೇಷನ್ ಕಾರ್ಡ್ ದಾರರು ದೇಶದ ಯಾವುದೇ ರಾಜ್ಯದಲ್ಲಿ ಪಡಿತರ ಪಡೆಯಲು ಅನುಕೂಲವಾಗುವಂತೆ ಈ ಒಂದು ದೇಶ ಒಂದು ರೇಶನ್ ಕಾರ್ಡ್ ಯೋಜನೆ ಜಾರಿಗೆ ಬರಲಿದೆ.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಚೀಟಿ ಹಾಗೂ ಫಲಾನುಭವಿಗಳ ಮಾಹಿತಿ ಅಂಕಿ ಅಂಶಗಳನ್ನು ಆನ್ ಲೈನ್ ಗೊಳಿಸುವ ಹೊಸ ಯೋಜನೆಗೆ ಕೇಂದ್ರ ಸರಕಾರ ಮುಂದಾಗಿದೆ. ಮುಂದಿನ ವರ್ಷದಿಂದ ಈ ಯೋಜನೆ ಮೊದಲ ಹಂತ ಜಾರಿಗೆ ಬರಲಿದ್ದು, ವಿವಿಧ ಹಂತಗಳಲ್ಲಿ ದೇಶದಾದ್ಯಂತ ಈ ಯೋಜನೆ ಜಾರಿಗೊಳ್ಳಲಿದೆ.

ಜಿಎಸ್ ಟಿ ಜಾಲದ ರೀತಿಯಲ್ಲೇ ಪಡಿತರ ಸಮಗ್ರ ನಿರ್ವಹಣಾ ಜಾಲ ಜಾರಿಗೆ ತರಲು ಸರಕಾರ ನಿರ್ಧರಿಸಿದ್ದು, ಐಎಂಪಿಡಿಎಸ್ಎನ್ ಮೂಲಕ ಒಂದು ರಾಜ್ಯ ಇನ್ನೊಂದು ರಾಜ್ಯದ ಪಡಿತರ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಿಂದಾಗಿ ಬೆರೆ ರಾಜ್ಯಗಳಿಗೆ ವಲಸೆ ಹೋಗಿ ಜೀವನ ನಡೆಸುವವರು ಅಯಾ ರಾಜ್ಯದಲ್ಲಿ ಪಡಿತರವನ್ನು ಪಡೆಯಬಹುದಾಗಿದೆ.

ಆಧಾರ್ ಮಾದರಿಯಲ್ಲೇ ರೇಷನ್ ಕಾರ್ಡ್ ಗೆ ವಿಶಿಷ್ಟ ಗುರುತಿನ ನಂಬರ್ ನ್ನು ಸರಕಾರ ನೀಡಲಿದ್ದು. ಐಎಂಪಿಡಿಎಸ್ಎನ್ ಮೂಲಕ ಇದನ್ನು ಸಂಗ್ರಹಿಸಲಾಗುತ್ತದೆ. ಗ್ರಾಹಕನ ಮಾಹಿತಿ ಆತ ಪಡಿತರ ಸಹಿತ ಎಲ್ಲಾ ವಿವರಗಳು ಇದರಲ್ಲಿರಲಿದ್ದು , ದೇಶದ ಯಾವುದೇ ಮೂಲೆಯಲ್ಲೂ ಕೂಡ ದೇಶದ ನಾಗರೀಕ ತನ್ನ ಪಡಿತರ ಪಡೆಯಲು ಇದು ಅನುಕೂಲವಾಗಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *