LATEST NEWS
ಕೋಟ ಖಾಸಗಿ ಕಾಲೇಜಿನ ಓಣಂ ಸೆಲೆಬ್ರೇಶನ್ – ಹಳೆಯ ವಿಡಿಯೋ ಎಂದು ಅಧಿಕಾರಿಗಳನ್ನು ನಂಬಿಸಿದ ಕಾಲೇಜ್
ಕೋಟ ಅಗಸ್ಟ್ 23: ಶೇಕಡ 2 ಕ್ಕಿಂತ ಅಧಿಕ ಕೊರೊನಾ ಪಾಸಿಟಿವಿಟಿ ರೇಟ್ ಇದ್ದರೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿ ತೂರಲಾಗುತ್ತಿದೆ. ಉಡುಪಿ ಜಿಲ್ಲೆಯ ಕೋಟದಲ್ಲಿರುವ ಖಾಸಗಿ ಕಾಲೇಜಿವ ವಿಧ್ಯಾರ್ಥಿಗಳು ಕೊರೋನಾ ನಿಯಮಾವಳಿಗಳನ್ನು ಮೀರಿ ಓಣಂ ಆಚರಿಸಿ, ಮೋಜು ಮಸ್ತಿ ನಡೆಸಿದ್ದ ವಿಡಿಯೋ ಒಂದು ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬ್ರಹ್ಮಾವರ ತಹಶೀಲ್ದಾರ್ ತಂಡಕ್ಕೆ ಕಾಲೇಜು ಆಡಳಿತ ಮಂಡಳಿ ಇದು ಎರಡು ವರ್ಷದ ಹಳೆದ ವಿಡಿಯೋ ತಿಳಿಸಿದ್ದು, ಓಣಂ ಸಂಭ್ರಮದ ಹಿನ್ನಲೆಯಲ್ಲಿ ಊಟದ ವ್ಯವಸ್ಥೆ ಮಾತ್ರ ಮಾಡಿರುವುದಾಗಿ ಹೇಳಿಕೆ ಕಾಲೇಜು ಮಂಡಳಿ ತಿಳಿಸಿದೆ.
ಇನ್ನು ಕಾಲೇಜು ಆಡಳಿತ ಮಂಡಳಿ ನೀಡಿದ ಹೇಳಿಕೆಯನ್ನು ತಮ್ಮ ವರದಿಯಲ್ಲಿ ನಮೂದಿಸಿದ ತಹಶೀಲ್ದಾರ ವಾಪಾಸ್ ತೆರಳಿದ್ದಾರೆ. ಆದರೆ ಸ್ಥಳೀಯರ ಪ್ರಕಾರ ಕಳೆದ 1 ವರೆ ವರ್ಷದ ಹಿಂದೆಯಷ್ಟೆ ಇಸಿಆರ್ ಕಾಲೇಜು ಪ್ರಾರಂಭವಾಗಿದ್ದು, ಇದು ಮೊನ್ನೆಯ ಓಣಂ ಮೋಜು ಮಸ್ತಿಯ ವಿಡಿಯೋ ಆಗಿದ್ದು ಅದನ್ನು ಹಳೆಯ ವಿಡಿಯೋ ಎಂದು ಅಧಿಕಾರಿಗಳಿಗೆ ಇಸಿಆರ್ ಕಾಲೇಜು ನಂಬಿಸಿದೆ ಎಂದು ಆರೋಪಿಸಿದ್ದಾರೆ.
ಕೊರೋನಾ ರೂಲ್ಸ್ ಬ್ರೇಕ್ ಮಾಡಿರುವ ಕುರಿತು ವಿಡಿಯೋ ಸಾಕ್ಷಿ ಇದ್ದರು ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದ್ದು, ಕಾಲೇಜು ಆಡಳಿತ ಮಂಡಳಿಯ ಮೇಲೆ ಯಾವುದೇ ಕ್ರಿಮಿನಲ್ ಆಕ್ಷನ್ ಪಡೆಯದ ಕುರಿತು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.