LATEST NEWS
ಸಸಿಹಿತ್ಲು ಕಡಲ ಕಿನಾರೆಯಲ್ಲಿ ಮೊಟ್ಟೆ ಇಟ್ಟ ಆಮೆಗಳು
ಮಂಗಳೂರು ಫೆಬ್ರವರಿ 04: ಹಲವು ದಶಕಗಳ ಬಳಿಕ ಇದೇ ಮೊದಲ ಬಾರಿ ದಕ್ಷಿಣಕನ್ನಡ ಜಿಲ್ಲೆಯ ಸಮುದ್ರ ತೀರದಲ್ಲಿ ಆಮೆಗಳು ಮೊಟ್ಟೆ ಇಟ್ಟಿವೆ.
ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ತೀರದಲ್ಲಿ ಅಳಿವಿನಚಿನ ಅತ್ಯಂತ ಅಪರೂಪದ ಒಲೀವ್ ರಿಡ್ಲೆ ಕಡಲಾಮೆಗಳು ಕಾಣಿಸಿಕೊಂಡಿವೆ. ಕಡಲಾಮೆ ಒಲೀವ್ ರಿಡ್ಲೆ ಮಂಗಳೂರು ಕಡಲ ಕಿನಾರೆಗೆ ಬಂದು ಮೊಟ್ಟೆ ಇಟ್ಟಿವೆ. ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ತಡಿಗೆ ಬಂದು ಮೊಟ್ಟೆ ಇಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಹಿಂದೆ ಮಂಗಳೂರಿನ ಕಡಲತಡಿಯ ತಣ್ಣೀರು ಬಾವಿ, ಸಸಿಹಿತ್ಲು, ಬೆಂಗ್ರೆ ಪ್ರದೇಶಕ್ಕೆ ಕಡಲಾಮೆಗಳು ಬರುತ್ತಿದ್ದವು. ಅಳಿವಿನಂಚಿನಲ್ಲಿದ್ದ ಒಲೀವ್ ರಿಡ್ಲೆ ತಳಿಯ ಕಡಲಾಮೆಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸೂಚಿ 1 ರ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ. ಒಲೀವ್ ರಿಡ್ಲೆ ಕಡಲಾಮೆಗಳ ವಿಶೇಷವೆಂದರೆ ತಾವು ಹುಟ್ಟಿದ ಜಾಗಕ್ಕೆ ಮರಳಿ ಬಂದು ಮೊಟ್ಟೆಯಿಡುತ್ತವೆ.