LATEST NEWS
‘ಮಗ-ಸೊಸೆ’ಯ ಸೊಕ್ಕು ಮುರಿದ ವೃದ್ಧ, ಒಂದೂವರೆ ಕೋಟಿ ಆಸ್ತಿ ‘ರಾಜ್ಯಪಾಲ’ರಿಗೆ…!

ಮುಜಾಫರ್ನಗರ, ಮಾರ್ಚ್ 07: ಪೋಷಕರು ಮಕ್ಕಳಿಗಾಗಿ ಇಡೀ ನಮ್ಮ ಸರ್ವಸ್ವವನ್ನೇ ತ್ಯಾಗ ಮಾಡ್ತಾರೆ. ಆದ್ರೆ, ಅದೇ ಮಕ್ಕಳು ತಂದೆ-ತಾಯಿಗೆ ವಯಸ್ಸಾದ್ಮೇಲೆ ಒಂದು ತುತ್ತು ಊಟ ಹಾಕಲು ಕೂಡ ಗೊಣಗಾಡುತ್ತಾರೆ. ಆದ್ರೆ, ಇಲ್ಲೊಬ್ಬ ತಂದೆಗೂ ಇದೇ ಪರಿಸ್ಥಿತಿ ಎದುರಾಗಿದ್ದು, ಜೀವನದ ಕೊನೆಗಾಲದಲ್ಲಿ ಅಳಿಯ, ಸೊಸೆಯಿಂದ ಪ್ರೀತಿ, ಸಹಾನುಭೂತಿ ಸಿಗಲಿಲ್ಲ.
ಅವರ ಆಸ್ತಿ ಮೇಲೆ ಇಬ್ಬರದ್ದು ಕಣ್ಣಿತ್ತು. ಸಧ್ಯ ಆ ತಂದೆ ತನ್ನ ಮೇಲೆ ಕೊಂಚವೂ ಪ್ರೀತಿ ತೊರದ ಮಗ-ಸೊಸೆಗೆ ಶಾಕ್ ನೀಡಿದ್ದು, ಇಡೀ ಆಸ್ತಿಯನ್ನ ರಾಜ್ಯಪಾಲರಿಗೆ ಬರೆದುಕೊಟ್ಟಿದ್ದಾರೆ. ಮುಜಾಫರ್ನಗರದ ಬಿರಾಲ್ ಗ್ರಾಮದವರಾದ ಸಿಂಗ್ ಪ್ರಸ್ತುತ ವೃದ್ಧಾಶ್ರಮದಲ್ಲಿದ್ದಾರೆ. ಅವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆ.

ನಾಥು ಸಿಂಗ್ ಅವರು ಯುಪಿ ಗವರ್ನರ್ ಗೆ ಆಸ್ತಿಯನ್ನ ಹಸ್ತಾಂತರಿಸಲು ಅಫಿಡವಿಟ್ ಸಲ್ಲಿಸಿದ್ದಾರೆ, ಈ 80 ವರ್ಷದ ವ್ಯಕ್ತಿ ಸುಮಾರು ರೂ.1.5 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಅವೆಲ್ಲವನ್ನೂ ರಾಜ್ಯಪಾಲರಿಗೆ ನೀಡಿದ್ದಾರೆ.
ನಾಥು ಸಿಂಗ್ ಒಬ್ಬ ರೈತನಾಗಿದ್ದು, ತನ್ನ ಮಗ ಮತ್ತು ಸೊಸೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಹಾಗಾಗಿ ತನ್ನ ಆಸ್ತಿಯನ್ನ ಅವ್ರಿಗೆ ನೀಡಲು ನನಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ಯಾರೂ ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ: ‘ಈ ವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ಬದುಕಬೇಕಾಗಿತ್ತು. ಆದ್ರೆ, ಅವರು ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಹಾಗಾಗಿ ಆಸ್ತಿಯನ್ನ ರಾಜ್ಯಪಾಲರಿಗೆ ಹಸ್ತಾಂತರಿಸಲು ನಿರ್ಧರಿಸಿದ್ದು, ಅದನ್ನ ಸಮರ್ಪಕವಾಗಿ ಬಳಸಿಕೊಳ್ಳಿ’ ಎಂದು ನಾಥು ಸಿಂಗ್ ಹೇಳಿದ್ದಾರೆ. ವೃದ್ಧಾಶ್ರಮದ ಉಸ್ತುವಾರಿ ರೇಖಾ ಸಿಂಗ್ ಕೂಡ ಇದೇ ವಿಷಯವನ್ನ ಸ್ಪಷ್ಟಪಡಿಸಿದ್ದಾರೆ.
ನಾಥು ಸಿಂಗ್ ಅವರ ಸಾವಿನ ನಂತ್ರ ಅವರ ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಕೂಡ ಬರವ ಅವಶ್ಯಕತೆಯಿಲ್ಲ ಎಂದು ನಾಥುಸಿಂಗ್ ಅವರ ಮನವಿಯನ್ನ ದಾಖಲಿಸಲಾಗಿದೆ ಎಂದು ಬುಧಾನ ತಹಸಿಲ್ ಸಬ್ ರಿಜಿಸ್ಟ್ರಾರ್ ಪಂಕಜ್ ಜೈನ್ ತಿಳಿಸಿದ್ದಾರೆ. ಅವರ ವಾಸದ ಮನೆ, ಕೃಷಿ ಭೂಮಿ ಹಾಗೂ 1.5 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನ ಅಫಿಡವಿಟ್’ನಲ್ಲಿ ನಮೂದಿಸಲಾಗಿದೆ. ಅವರ ಮರಣದ ನಂತರ ಇದು ಜಾರಿಗೆ ಬರಲಿದೆ.