LATEST NEWS
76 ವರ್ಷ ವಯಸ್ಸಿನ ವೃದ್ದನಿಂದ ದಂಪತಿ ಮೇಲೆ ಮರಾಣಾಂತಿಕ ಹಲ್ಲೆ

76 ವರ್ಷ ವಯಸ್ಸಿನ ವೃದ್ದನಿಂದ ದಂಪತಿ ಮೇಲೆ ಮರಾಣಾಂತಿಕ ಹಲ್ಲೆ
ಮಂಗಳೂರು ಅಗಸ್ಟ್ 12: ತಂಗಿ ಮತ್ತು ಬಾವನಿಗೆ ಮೈದುನ ಮಾರಣಾಂತಿಕ ಹಲ್ಲೆಗೈದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡಿನಲ್ಲಿ ಈ ಘಟನೆ ನಡೆದಿದ್ದು, ಜಾನೆಟ್ (60), ಜೋಸೆಫ್ (65) ಹಲ್ಲೆಗೊಳಗಾದ ದಂಪತಿ ಎಂದು ಗುರುತಿಸಲಾಗಿದೆ.
ದಂಪತಿ ಮನೆಯಲ್ಲಿ ಊಟ ಮಾಡಿ ಮಲಗಿರುವ ಸಂದರ್ಭ ಆರೋಪಿ 76 ವರ್ಷ ವಯಸ್ಸಿನ ಡೆನ್ನಿಸ್ ದಂಪತಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೈದ ಬಳಿಕ ಉಳ್ಳಾಲ ಠಾಣೆಗೆ ವೃದ್ಧ ಡೆನ್ನಿಸ್ (76) ಶರಣಾಗಿದ್ದಾರೆ. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಆರೋಪಿ ಡೆನ್ನಿಸ್ ಉಳ್ಳಾಲ ಪೊಲೀಸ್ ವಶದಲ್ಲಿದ್ದಾರೆ.