KARNATAKA
ರನ್ಯಾ ರಾವ್ ಶೋಕಿಗೆ ಅಧಿಕಾರಿಗಳೇ ಶಾಕ್ – ನಟಿ ಬಳಿ ಕೋಟಿ ಮೌಲ್ಯದ 39 ವಿದೇಶಿ ವಾಚ್‌ಗಳು

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಬಂಧನ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ನಟಿ ಬಳಿಯಿದ್ದ ಬರೋಬ್ಬರಿ 39 ವಾಚ್‌ಗಳು ಪತ್ತೆಯಾಗಿವೆ.
ಈಗಾಗಲೇ ಡಿಆರ್‌ಐ ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆದಿದೆ. ಇಂದು ಪೊಲೀಸ್ ಕಸ್ಟಡಿಯೂ ಅಂತ್ಯ ಆಗಲಿದೆ. ಕಳೆದ ಐದು ದಿನಗಳ ಹಿಂದೆ ರನ್ಯಾ ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದ ಆರ್‌ಡಿಐ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿತ್ತು.

ಈ ನಡುವೆ ಇನ್ನೊಂದು ಆಶ್ಚರ್ಯಕರ ವಿಚಾರ ಬೆಳಕಿಗೆ ಬಂದಿದೆ. ರನ್ಯಾ ರಾವ್‌ಗೆ ಇದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವಿದೇಶಿ ವಾಚ್‌ಗಳು ಸಿಕ್ಕಿವೆ. 39 ವಿದೇಶಿ ವಾಚ್‌ಗಳು ಪತ್ತೆಯಾಗಿವೆ. ಆದರೆ, ಚಿನ್ನಾಭರಣ ಮತ್ತು ಹಣವನ್ನು ಮಾತ್ರ ಡಿಆರ್‌ಐ ವಶಕ್ಕೆ ಪಡೆದಿದೆ. ವಾಚ್‌ಗಳನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿಲ್ಲ. ಸದ್ಯಕ್ಕೆ ತನಿಖೆ ಮುಂದುವರಿದಿದೆ.