LATEST NEWS
ಸಬ್ಸಿಡಿಗಾಗಿ ಲಂಚ ಎಸಿಬಿ ಬಲೆ ಬಿದ್ದ ಅಧಿಕಾರಿ
ಸಬ್ಸಿಡಿಗಾಗಿ ಲಂಚ ಎಸಿಬಿ ಬಲೆ ಬಿದ್ದ ಅಧಿಕಾರಿ
ಮಂಗಳೂರು ಮೇ 21: ಸಬ್ಸಿಡಿಗಾಗಿ ಲಂಚ ಕೇಳಿದ ಆರೋಪದಡಿ ಮಂಗಳೂರಿನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಗೆ ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಲ್ಪಸಂಖ್ಯಾತ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ, ಮತ್ತು ಕಚೇರಿಯ ಕ್ಲರ್ಕ್ ರಾಹಿಲ್ ಎಂದು ಗುರುತಿಸಲಾಗಿದೆ. ಇಬ್ಬರು ಆರೋಪಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶರತ್ ಪಿಂಟೋ ಎಂಬವರು ಎಸಿಬಿ ನೀಡಿದ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಶರತ್ ಪಿಂಟೋ ಅಲ್ಪಸಂಖ್ಯಾತ ನಿಗಮದಲ್ಲಿ 2 ಲಕ್ಷ ಸಾಲ ಪಡೆದಿದ್ದರು. ಈ ಸಾಲದಲ್ಲಿ ಒಂದು ಲಕ್ಷ ರೂಪಾಯಿಯನ್ನು ಸಬ್ಸಿಡಿಯನ್ನು ಅರ್ಜಿದಾರ ಪಡೆಯಬೇಕಿತ್ತು. ಆದರೆ ಸಬ್ಸಿಡಿ ನೀಡಲು 10 ಸಾವಿರ ರೂ. ಲಂಚದ ಬೇಡಿಕೆಯನ್ನು ನಿಗಮದ ವ್ಯವಸ್ಥಾಪಕ ಶ್ರೀಧರ ಭಂಡಾರಿ ಮುಂದಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಶರತ್ ಅವರು ಎಸಿಬಿ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು 7 ಸಾವಿರ ರೂಪಾಯಿ ಲಂಚ ನೀಡುತ್ತಿದ್ದಾಗ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದಾರೆ.