LATEST NEWS
ರೀಲ್ಸ್ ವಿಡಿಯೋಗಾಗಿ ರೈಲ್ವೆ ಹಳಿಗಳ ಮಧ್ಯೆ ಮಲಗಿದ ಬಾಲಕ – ಆಮೇಲೇನಾಯ್ತು…?

ಭುವನೇಶ್ವರ ಜುಲೈ 07: ಒಡಿಶಾ ಭೋದ್ ಜಿಲ್ಲೆಯಲ್ಲಿ ರೈಲು ಹಾದುಹೋಗುವಾಗ ಪುಟ್ಟ ಬಾಲಕನೊಬ್ಬ ರೈಲ್ವೆ ಹಳಿಯ ಮೇಲೆ ಮಲಗಿ ರೀಲ್ಸ್ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗಿದ್ದ, ಬರೀ ರೀಲ್ಸ್ ಗೋಸ್ಕರ ಮಕ್ಕಳು ತಮ್ಮ ಜೀವನವನ್ನೇ ಪಣಕ್ಕಿಡುವ ಮಟ್ಟಕ್ಕೆ ಇಳಿದಿರುವುದು ಭಾರೀ ಆತಂಕಕಾರಿ ಘಟನೆಯಾಗಿದೆ.
ಒಡಿಶಾದ ಭೋದ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಒಬ್ಬ ಬಾಲಕ ರೈಲ್ವೆ ಹಳಿಗಳಲ್ಲಿ ಮಲಗಿದ್ದು, ಮತ್ತೊಬ್ಬ ಯುವಕ ಈ ಘಟನೆಯನ್ನು ಚಿತ್ರೀಕರಿಸಿದ್ದಾನೆ. ಅಪಾಯಕಾರಿ ಸಾಹಸ ಪ್ರದರ್ಶನ ನೀಡಿ ಚಿತ್ರೀಕರಿಸಿದ ಇಬ್ಬರು ಅಪ್ರಾಪ್ತ ಬಾಲಕರ ವಿರುದ್ಧ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಕರಣ ದಾಖಲಿಸಿದೆ.

ಜೂನ್ 29 ರಂದು ಪುರುನಪಾಣಿ ನಿಲ್ದಾಣದ ಬಳಿಯ ಈ ಘಟನೆ ನಡೆದಿದ್ದು, 12 ವರ್ಷದ ಅಪ್ರಾಪ್ತ ಬಾಲಕನೊಬ್ಬ ರೈಲ್ವೆ ಹಳಿಗಳ ಮೇಲೆ ಮಲಗಿದ್ದಾನೆ. ಈ ವೇಳೆ ಆತನ ಮೇಲೆ ರೈಲೊಂದು ಸಂಚರಿಸಿದೆ. ಈ ವಿಡಿಯೋವನ್ನು ಮತ್ತೊಬ್ಬ ಬಾಲಕ ಚಿತ್ರೀಕರಿಸಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ರೈಲ್ವೆ ಪೊಲೀಸರು ಬಾಲಕರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಬಳಿಕ ಇಬ್ಬರು ಬಾಲಕರನ್ನು ಪತ್ತೆ ಹಚ್ಚಿ ಅವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ ರೈಲ್ವೆ ಹಳಿಗಳ ಮೇಲೆ ಈ ರೀತಿಯ ಅಪಾಯಕಾರಿ ಸಾಹಸ ಮಾಡುವುದರ ಕುರಿತು ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ.
ಆದರೆ ಒಂದು ರೀಲ್ಸ್ ವಿಡಿಯೋಗಾಗಿ ಮಕ್ಕಳು ಈ ಮಟ್ಟದ ಅಪಾಯಕಾರಿ ಸಾಹಸಕ್ಕೆ ಇಳಿದಿರುವುದು ಆತಂಕಕ್ಕೆ ಕಾರಣವಾಗಿದೆ.
A minor boy performs a dangerous stunt by lying on a railway track as a train passes over him, while his friend records the video. The children’s families have been summoned to the police station in #Boudh district | #Odisha@NewIndianXpress @santwana99 @Siba_TNIE pic.twitter.com/ir6lvNp9QU
— TNIE Odisha (@XpressOdisha) July 6, 2025
1 Comment