FILM
ಓಡಿಯಾ ಕಿರುತೆರೆ ನಟಿಯ ಮೃತದೇಹ ಪತ್ತೆ…!!

ಓರಿಸ್ಸಾ: ಇತ್ತೀಚೆಗೆ ಹೆಚ್ಚಾಗುತ್ತಿರುವ ಕಿರುತೆರೆ ನಟಿಯರ ಸಾವಿನ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದ್ದು, ಜನಪ್ರಿಯ ಒಡಿಯಾ ಕಿರುತೆರೆ ನಟಿ ರಶ್ಮಿರೇಖಾ ಓಜಾ ಅವರ ಮೃತದೇಹ ಭುವನೇಶ್ವರದ ನಯಾಪಲ್ಲಿ ಪ್ರದೇಶದಲ್ಲಿ ತಮ್ಮ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.
23 ವರ್ಷ ಪ್ರಾಯದ ನಟಿ ರಿಶ್ಮಿರೇಖಾ ಓಜಾ ಅವರು ಓರಿಸ್ಸಾದ ಜಗತ್‌ಸಿಂಗ್‌ಪುರ ಜಿಲ್ಲೆಯವರು. ಧಾರವಾಗಿ ಕೆಮಿತಿ ಕಹಿಬಿ ಕಹಾದಲ್ಲಿ ತನ್ನ ಪಾತ್ರದೊಂದಿಗೆ ಓಡಿಯಾ ಕಿರುತೆರೆಯಲ್ಲಿ ಹೆಸರುಗಳಿಸಿದ್ದರು. ಇವರು ತಮ್ಮ ಲಿವ್ ಇನ್ ಪಾರ್ಟನರ್ ಸಂತೋಷ್ ಎಂಬವರ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಜೂನ್ 18 ರ ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದ್ದು, ಸ್ಥಳದಲ್ಲಿ ದೊರೆತ ಒಂದು ಚೀಟಿಯಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾರೆ. ಆಕೆಯ ಸಾವಿನಲ್ಲಿ ಆಕೆಯ ಲೈವ್-ಇನ್ ಪಾರ್ಟನರ್ ಸಂತೋಷ್ ಪಾತ್ರಾ ಪಾತ್ರವಿದೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.

ರಶ್ಮಿರೇಖಾ ಅವರ ತಂದೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಗಳ ಸಾವಿನ ಬಗ್ಗೆ ಸಂತೋಷ್ ನವಗೆ ತಿಳಿಸಿದ್ದು. ಶನಿವಾರದಂದು ನಾವು ಆಕೆಗೆ ಕರೆ ಮಾಡಿದರೂ ಉತ್ತರಿಸಲಿಲ್ಲ. ನಂತರ ಸಂತೋಷ್ ನಮಗೆ ಸುದ್ದಿ ಮುಟ್ಟಿಸಿದರು. ಸಂತೋಷ್ ಮತ್ತು ರಶ್ಮಿ ಗಂಡ-ಹೆಂಡತಿಯಾಗಿ ವಾಸಿಸುತ್ತಿದ್ದರು ಎಂದು ಮನೆಯ ಮಾಲೀಕರಿಂದ ನಮಗೆ ತಿಳಿದಿತ್ತು. ನಮಗೆ ಅದರ ಬಗ್ಗೆ ತಿಳಿದಿರಲಿಲ್ಲ” ಎಂದು ಅವರು ಹೇಳಿದರು.