FILM
ನಟಿ ರಮ್ಯಾ ಗೆ ಅಶ್ಲೀಲ ಸಂದೇಶಗಳು – ನಟ ದರ್ಶನ ಅಭಿಮಾನಿಗಳ ವಿರುದ್ದ ರಮ್ಯಾ ಗರಂ

ಬೆಂಗಳೂರು ಜುಲೈ 27: ದರ್ಶನ ಅಭಿಮಾನಿಗಳ ವಿರುದ್ದ ನಟಿ ರಮ್ಯಾ ಗರಂ ಆಗಿದ್ದಾರೆ. ನಿನ್ನೆ ಸಾಮಜಾಿಕ ಜಾಲತಾಣಗಳಲ್ಲಿ ನಟ ದರ್ಶನ ಅಭಿಮಾನಿಗಳ ವಿರುದ್ದ ಇನ್ಸ್ಟಾಗ್ರಾಂ ಸ್ಟೋರಿ ಒಂದನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ನಟಿ ರಮ್ಯಾಗೆ ದರ್ಶನ ಅಭಿಮಾನಿಗಳು ಅಶ್ಲೀಲ ಮೇಸೆಜ್ ಗಳನ್ನು ಕಳುಹಿಸಿದ್ದಾರೆ.
ಈ ಕುರಿತಂತೆ ಮತ್ತೆ ಇಂದು ಇನ್ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡಿರುವ ನಟಿ ರಮ್ಯಾ ‘ರೇಣುಕಾಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ.

ಇಂಥಹಾ ಸ್ತ್ರೀದ್ವೇಷಿ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ’ ಎಂದಿದ್ದಾರೆ ರಮ್ಯಾ. ಅದರ ಜೊತೆಗೆ ದರ್ಶನ್ ಅಭಿಮಾನಿಗಳು ತಮಗೆ ಅವರಿಗೆ ಮಾಡಿರುವ ಅಶ್ಲೀಲ ಸಂದೇಶಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ರಮ್ಯಾ ಹಂಚಿಕೊಂಡಿದ್ದಾರೆ.
ರಮ್ಯಾ ಅವರನ್ನುದ್ದೇಶಿಸಿ ಅತ್ಯಂತ ಅಶ್ಲೀಲ ಸಂದೇಶಗಳನ್ನು ದರ್ಶನ್ ಅಭಿಮಾನಿಗಳು ಮಾಡಿದ್ದಾರೆ.