LATEST NEWS
ಮಂಗಳೂರು – ಕಲುಶಿತ ಆಹಾರ ಸೇವನೆ 137 ವಿಧ್ಯಾರ್ಥಿನಿಯರು ಅಸ್ವಸ್ಥ

ಮಂಗಳೂರು ಫೆಬ್ರವರಿ 7: ಕಲುಶಿತ ಆಹಾರ ಸೇವನೆಯಿಂದಾಗಿ 137 ವಿಧ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಗರದ ಶಕ್ತಿನಗರದ ಸಿಟಿ ಕಾಲೇಜ್ ಆಫ್ ನರ್ಸಿಂಗ್ ಸಂಸ್ಥೆಯ ಹಾಸ್ಟೆಲ್‌ನಲ್ಲಿ ನಡೆದಿದೆ.
ಹಾಸ್ಟೆಲ್ ನಲ್ಲಿ ಮಧ್ಯಾಹ್ನ ಉಟಕ್ಕೆ ಚಿಕನ್ ಘೀರೈಸ್ ಸೇವಿಸಿದ ವಿಧ್ಯಾರ್ಥಿನಿಯರಲ್ಲಿ ಹೊಟ್ಟೆ ನೋವು, ವಾಂತಿ, ಭೇದಿ ಶುರುವಾಗಿತ್ತು. ಹೊಟ್ಟೆ ನೋವಿನಿಂದ ನರಳುತ್ತಿದ್ದ ವಿದ್ಯಾರ್ಥಿನಿಯರನ್ನು ನಗರದ ಸಿಟಿ ಆಸ್ಪತ್ರೆ, ಮಂಗಳಾ ನರ್ಸಿಂಗ್ ಹೋಂ, ಕೆಎಂಸಿ ಹಾಗೂ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹಾಗೂ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಕೆ.ಜಗದೀಶ, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಶಾಸಕ ವೇದವ್ಯಾಸ ಕಾಮತ್ ಹಾಗೂ ಕಾಂಗ್ರೆಸ್ ಮುಖಂಡ ಜೆ.ಆರ್.ಲೋಬೊ ಅವರು ಸಿಟಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ಜಿಲ್ಲಾ ಆರೋಗ್ಯ ಇಲಾಖೆಯ ತಂಡವು ವಿದ್ಯಾರ್ಥಿನಿಯರು ವಾಸವಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. ಅಸ್ವಸ್ಥಗೊಳ್ಳಲು ಕಾರಣ ಏನೆಂದು ಪರಿಶೀಲಿಸಲಿದೆ’ ಎಂದು ಡಾ. ಜಗದೀಶ್ ತಿಳಿಸಿದರು.