LATEST NEWS
ಜೈನ ತಿರ್ಥಂಕರರ ವಿಗ್ರಹ ಕಳ್ಳಸಾಗಾಣಿಕೆಯಲ್ಲಿ ಜಿಲ್ಲೆಯ ಎನ್ ಎಸ್ ಯುಐ ಮುಖಂಡ
ಜೈನ ತಿರ್ಥಂಕರರ ವಿಗ್ರಹ ಕಳ್ಳಸಾಗಾಣಿಕೆಯಲ್ಲಿ ಜಿಲ್ಲೆಯ ಎನ್ ಎಸ್ ಯುಐ ಮುಖಂಡ
ಮಂಗಳೂರು ಫೆಬ್ರವರಿ 26: ಎನ್ಎಸ್ ಯುಐ ಮುಖಂಡನೊಬ್ಬ ಜೈನ ತಿರ್ಥಂಕರರ ವಿಗ್ರಹ ಕಳ್ಳ ಸಾಗಾಣಿಯ ಸಂದರ್ಭದಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸರು ಭೇದಿಸಿದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜೈನ ತೀರ್ಥಂಕರರ ಐದು ಮೂರ್ತಿ ವಶಪಡಿಸಿಕೊಂಡ ಈ ಪ್ರಕರಣದಲ್ಲಿ ಎನ್ಎಸ್ ಯುಐ ಮುಖಂಡ ಪ್ರಮುಖ ಆರೋಪಿಯಾಗಿದ್ದಾನೆ.
ಕೋಟೇಶ್ವರ ದೇವಸ್ಥಾನ ಬಳಿ ವಿಗ್ರಹ ಕಳ್ಳ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಕೋಟೇಶ್ವರ ದೇವಸ್ಥಾನ ಬಳಿ ದಾಳಿ ನಡೆಸಿ ವಿಗ್ರಹಗಳೊಂದಿಗೆ ಐವರನ್ನು ಬಂಧಿಸಿದ್ದರು. ಬಂಧಿತರನ್ನು ಮಂಗಳೂರಿನ ಪಡೀಲ್ ನಿವಾಸಿ ನೆವೀಲ್ ವಿಲ್ಲಿ ಮಸ್ಕರೇನಸ್, ಶಿವಮೊಗ್ಗ ತಾಳಗುಪ್ಪದ ಅನಿಲ್ ಪುಟಾರ್ಡೋ, ಮಂಗಳೂರಿನ ಕುಲ ಶೇಖರದ ಆ್ಯಸ್ಟೀನ್ ಸಿಕ್ವೇರಾ, ಕುಂದಾಪುರದ ಜಾನ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ.
ಆದರೆ ಬಂಧಿತರಲ್ಲಿ ಮಂಗಳೂರು ಕುಲಶೇಖರದ ಆ್ಯಸ್ಟೀನ್ ಸಿಕ್ವೇರಾ ದಕ್ಷಿಣ ಕನ್ನಡ ಎನ್ ಎಸ್ ಯು ಐ ಘಟಕದ ಕಾರ್ಯದರ್ಶಿ ಯಾಗಿರುವುದು ಬೆಳಕಿಗೆ ಬಂದಿದೆ. ಆ್ಯಸ್ಟೀನ್ ಸಿಕ್ವೇರಾ ಕಾಂಗ್ರೆಸ್ ನಾಯಕರೊಂದಿಗಿರುವ ಚಿತ್ರಗಳು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು. ಎನ್ ಎಸ್ ಯುಐ ಮುಖಂಡನೊಬ್ಬ ವಿಗ್ರಹ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಕುತೂಹಲ ಮೂಡಿಸಿದೆ.
ಬಂಧಿತರಿಂದ 5 ಜೈನ ತೀರ್ಥಂಕರ ಮೂರ್ತಿಗಳನ್ನು ವಶಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಹಿಂದೇಯೂ ವಿಗೃಹ ಕಳ್ಳತನ ಹಾಗು ಅಕ್ರಮ ಸಾಗಾಟದ ಕುರಿತು ಮಾಹಿತಿ ಇದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.