Connect with us

    LATEST NEWS

    ರಾಜ್ಯಕ್ಕೂ ಕಾಲಿಟ್ಟ ” ಫ್ರೀ ಕಾಶ್ಮೀರ್ ” ಫಲಕ..ಮೈಸೂರಿನ ಜೆಎನ್ ಯು ಪ್ರತಿಭಟನೆಯಲ್ಲಿ ತುಕಡೆ ಗ್ಯಾಂಗ್ ಮೆಂಟ್ಯಾಲಿಟಿ

    ರಾಜ್ಯಕ್ಕೂ ಕಾಲಿಟ್ಟ ” ಫ್ರೀ ಕಾಶ್ಮೀರ್ ” ಫಲಕ..ಮೈಸೂರಿನ ಜೆಎನ್ ಯು ಪ್ರತಿಭಟನೆಯಲ್ಲಿ ತುಕಡೆ ಗ್ಯಾಂಗ್ ಮೆಂಟ್ಯಾಲಿಟಿ

    ಮೈಸೂರು ಜನವರಿ 9: ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮೊಳಗಿದ ದೇಶ ವಿರೋಧಿ ಘೋಷಣೆಗಳು ಈಗ ರಾಜ್ಯಕ್ಕೂ ಕಾಲಿಟ್ಟಿದೆ. ಜೆಎನ್ ಯು ನ ತುಕಡೆ ಗ್ಯಾಂಗ್ ಮೆಂಟ್ಯಾಲಿಟಿ ರಾಜ್ಯದ ವಿಶ್ವವಿದ್ಯಾನಿಲಯ ವಿಧ್ಯಾರ್ಥಿಗಳ ಮೇಲೂ ಪ್ರಭಾವ ಬೀರುತ್ತಿರುವ ಆತಂಕ ಮೂಡಿಸಿದೆ.

    ಜೆಎನ್ ಯು ಆವರಣದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ ನಿನ್ನೆ ಬುಧವಾರ ಸಂಜೆ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನೆ ನಡೆದಿದ್ದು, ಈ ಸಂದರ್ಭದಲ್ಲಿ ” ಫ್ರೀ ಕಾಶ್ಮೀರ್ ” ಫಲಕ ಪ್ರದರ್ಶನಗೊಂಡಿದೆ.

    ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ದಲಿತ ವಿಧ್ಯಾರ್ಥಿ ಒಕ್ಕೂಟ, ಬಹುಜನ ವಿಧ್ಯಾರ್ಥಿ ಸಂಘ ಎಸ್ಎಫ್ ಐ, ಎಐಡಿಎಸ್ಓ ವತಿಯಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕುವೆಂಪು ಪ್ರತಿಮೆ ಬಳಿ ಸಮಾವೇಶಗೊಂಡು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿದರು. ಈ ವೇಳೆ ಪ್ರತಿಭಟನಾಕಾರರು ” ಫ್ರೀ ಕಾಶ್ಮೀರ್ ” ಫಲಕ ಪ್ರದರ್ಶಿಸಿ ಜೆಎನ್ ಯು ತುಕಡೆ ಗ್ಯಾಂಗ್ ಮನಸ್ಥಿತಿ ಪ್ರದರ್ಶಿಸಿದರು. ಜೆಎನ್ ಯು ವಿಧ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೂ ” ಫ್ರೀ ಕಾಶ್ಮೀರ್ “ಗೂ ಎಂತಹ ಸಂಬಂಧ ಎನ್ನುವುದು ಪ್ರತಿಭಟನಾ ನಿರತ ವಿಧ್ಯಾರ್ಥಿಗಳಿಗೂ ಅರ್ಥವಾಗಿರಲಿಕ್ಕಿಲ್ಲ.

    ಈ ರೀತಿಯ ” ಫ್ರೀ ಕಾಶ್ಮೀರ್ ” ಫಲಕಗಳು ಕೇವಲ ಜೆಎನ್ ಯು ನಲ್ಲಿ ನಡೆಯವ ಪ್ರತಿಭಟನೆ ಸಂದರ್ಭದಲ್ಲಿ ವಾಮಪಂಥಿಯ ವಿಧ್ಯಾರ್ಥಿಗಳು ಮಾತ್ರ ಪ್ರದರ್ಶಿಸುತಿದ್ದರು , ಆದರೆ ಇತ್ತೀಚೆಗೆ ಮುಂಬಯಿ, ದೆಹಲಿಯಲ್ಲಿ ನಡೆದ ವಿಧ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ಈ ” ಫ್ರೀ ಕಾಶ್ಮೀರ್ ” ಫಲಕ ಕಂಡು ಬಂದಿದೆ.

    ಜೆಎನ್ ಯು ತುಕಡೆ ಗ್ಯಾಂಗ್ ನ ಸದಸ್ಯರು ದೇಶದಾದ್ಯಂತ ಪ್ರತಿಭಟನೆಗೆ ಉತ್ತೇಜನ ನೀಡುತಿದ್ದು, ಅದರ ಎಡೆಯಲ್ಲಿ ತಮ್ಮ ಹಿಡನ್ ಅಜೆಂಡಾವನ್ನು ಪೂರೈಸಿಕೊಳ್ಳುವ ಹಾಗೂ ಭಯೋತ್ಪಾದಕರಿಗೆ ಪ್ರೋತ್ಸಾಹಿಸುವ ಯೋಜನೆ ರೂಪಿಸಿದಂತಿದೆ. ಮೈಸೂರಿನಲ್ಲಿ ಪ್ರದರ್ಶಿಸಲಾದ ” ಫ್ರೀ ಕಾಶ್ಮೀರ್ ” ಫಲಕದ ಕುರಿತು ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕೆಂಬ ಕೂಗು ಕೇಳಿ ಬರುತ್ತಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *