Connect with us

    DAKSHINA KANNADA

    ಪಕ್ಷ ವಿರೋಧಿ ಚಟುವಟಿಕೆ, ಕಾವು ಹೇಮನಾಥ ಶೆಟ್ಟಿ, ಮಹಮ್ಮದ್ ಆಲಿ ಸೇರಿದಂತೆ ಐವರಿಗೆ ರಾಜ್ಯ ಶಿಸ್ತು ಸಮಿತಿ ನೋಟಿಸ್

    ಪಕ್ಷ ವಿರೋಧಿ ಚಟುವಟಿಕೆ, ಕಾವು ಹೇಮನಾಥ ಶೆಟ್ಟಿ, ಮಹಮ್ಮದ್ ಆಲಿ ಸೇರಿದಂತೆ ಐವರಿಗೆ ರಾಜ್ಯ ಶಿಸ್ತು ಸಮಿತಿ ನೋಟಿಸ್

    ಪುತ್ತೂರು,ಜುಲೈ 23: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನಲೆಯಲ್ಲಿ ಪುತ್ತೂರಿನ ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ನಗರ ಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ , ಸದಸ್ಯ ಮಹಮ್ಮದ್ ಆಲಿ, ಫಸಲ್ ರಹಮಾನ್ ಮತ್ತು ಮಹೇಶ್ ಅಂಕತ್ತಿಮಾರ್ ಗೆ ರಾಜ್ಯ ಕಾಂಗ್ರೇಸ್ ಶಿಸ್ತು ಸಮಿತಿ ನೋಟೀಸ್ ಜಾರಿ ಮಾಡಿದೆ.

    ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಕುಂತಲಾ ಶೆಟ್ಟಿ ವಿರುದ್ಧವಾಗಿ ಕಾರ್ಯಾಚರಿಸಿದ್ದರು ಎನ್ನುವ ಆರೋಪವನ್ನು ಪುತ್ತೂರು ಬ್ಲಾಕ್ ಕಾಂಗ್ರೇಸ್ ಮೂಲಕ ಮಾಡಲಾಗಿತ್ತು.

    ವಿರೋಧ ಪಕ್ಷದವರೊಂದಿಗೆ ಸೇರಿಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಲು ನಡೆಸಿದ ಪ್ರಯತ್ನ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ನಡೆಸಿದ ಸಭೆಗೆ ವಿರುದ್ಧವಾಗಿ ಅನಧಿಕೃತ ಸಭೆ ಸೇರಿದಂತೆ ಹಲವು ಆರೋಪಗಳನ್ನು ಈ ಐವರ ಮೇಲೆ ಮಾಡಲಾಗಿದೆ.

    ಈ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಪುರಾವೆಗಳನ್ನೂ ಬ್ಲಾಕ್ ಕಾಂಗ್ರೇಸ್ ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಮೂಲಕ ರಾಜ್ಯ ಸಮಿತಿಗೆ ನೀಡಲಾಗಿದೆ ಎನ್ನಲಾಗಿದೆ.

    ಈ ಸಂಬಂಧ ರಾಜ್ಯ ಸಮಿತಿ ಅಧ್ಯಕ್ಷ ವಿ.ಆರ್. ಸುದರ್ಶನ್ ಈ ಐವರಿಗೂ ನೋಟೀಸ್ ಜಾರಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಈ ಐವರ ಮೇಲಿರುವ ಆರೋಪ ಸಾಬೀತಾದಲ್ಲಿ ಮುಂದೆ ಬರುವ ನಗರಸಭಾ ಚುನಾವಣೆಗೆ ಮೊದಲು ಇವರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

    ಐವರನ್ನೂ ಪಕ್ಷ 6 ವರ್ಷಗಳ ಕಾಲ ಅಮಾನತು ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

    ಒಂದು ವೇಳೆ ಪಕ್ಷ ಈ ಐವರ ಮೇಲೆ ಕ್ರಮ ಕೈಗೊಂಡದ್ದೇ ಆದಲ್ಲಿ ನಗರಸಭೆಯ ಹಾಲಿ ಅಧ್ಯಕ್ಷೆ ಜಯಂತಿ ಬಲ್ನಾಡ್ ಹಾಗೂ ಸದಸ್ಯ ಮಹಮ್ಮದ್ ಆಲಿಗೆ ಈ ಬಾರಿ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸುವ ಅವಕಾಶ ತಪ್ಪಲಿದೆ.

    ಅದರಲ್ಲೂ ಮಹಮ್ಮದ್ ಆಲಿ ವಿರುದ್ಧ ಪುತ್ತೂರು ಕಾಂಗ್ರೇಸ್ ಪಕ್ಷದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಯಾವುದೇ ಕಾರಣಕ್ಕೂ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎನ್ನುವ ಒತ್ತಡವನ್ನೂ ರಾಜ್ಯ ನಾಯಕರ ಮೇಲೆ ಹೇರಲಾಗಿದೆ ಎನ್ನುವುದು ವಿಚಾರ ತಿಳಿದು ಬಂದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *