Connect with us

DAKSHINA KANNADA

ಗಮನಿಸಿ :ನಾಳೆ ಬುಧವಾರ ಮಂಗಳೂರು ನಗರದಲ್ಲಿ ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023, ಸಂಚಾರದಲ್ಲಿ ಭಾರಿ ಬದಲಾವಣೆ

ಮಂಗಳೂರು : ನಾಳೆ ಬುಧವಾರ ಮಂಗಳೂರು ನಗರದಲ್ಲಿ ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023 ನ್ನು ಮಂಗಳೂರು ಪೊಲೀಸರು ಆಯೋಜಿಸಿದ್ದು ನಗರ ಸಂಚಾರಲ್ಲಿ ಭಾರಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ನಾಳೆ ದಿನಾಂಕ 01-11-2023 ರಂದು ಸಂಜೆ 4-00 ಗಂಟೆಗೆ 68 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳೂರು ನಗರ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ಜೊತೆಯಾಗಿ ನಡೆಯೋಣ, ಡ್ರಗ್ಸ್ ಮುಕ್ತ ಭವಿಷ್ಯಕ್ಕಾಗಿ ವಾಕಥಾನ್-2023 ಮೆರವಣಿಗೆಯಲ್ಲಿ 120 ಕ್ಕೂ ಅಧಿಕ ವಿದ್ಯಾಸಂಸ್ಥೆಗಳ ಸುಮಾರು 5000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸದ್ರಿ ವಾಕಥಾನ್ ಪುರಭವನದಿಂದ ಹೊರಟು ಹಂಪನಕಟ್ಟೆ, ಕೆ.ಎಸ್.ರಾವ್ ರಸ್ತೆ, ನವಭಾರತ ವೃತ್ತ, ಪಿವಿಎಸ್, ಲಾಲ್‌ಭಾಗ್, ಲೇಡಿಹಿಲ್, ನಾರಾಯಣ ಗುರು ವೃತ್ತ ಮುಖಾಂತರ ಮಂಗಳ ಕ್ರೀಡಾಂಗಣ ತಲುಪಲಿದ್ದು, ಈ ಸಂಬಂಧ ನಗರದಲ್ಲಿ ಮಾಡಲಾಗಿರುವ ವಾಹನ ಸಂಚಾರ ನಿಷೇಧ, ಮಾರ್ಪಾಡು ಹಾಗೂ ವಾಹನ ನಿಲುಗಡೆ ನಿಷೇಧದ ವಿವರ ಈ ಕೆಳಗಿನಂತಿದೆ.

ವಾಹನ ಸಂಚಾರ ನಿಷೇಧ ಹಾಗೂ ಮಾರ್ಪಾಡು ವಿವರ:-

1. ಮಂಗಳೂರು ನಗರ ಸಿಟಿ ಮತ್ತು ಸರ್ವಿಸ್ ಬಸ್ಸು ನಿಲ್ದಾಣದ ಕಡೆಯಿಂದ ಕ್ಲಾಕ್ ಟವರ್ ಕಡೆಗಿನ ರಸ್ತೆಯಲ್ಲಿ ಮೆರವಣಿಗೆಯು ಪುರಭವನದ ದಕ್ಷಿಣ ದ್ವಾರದಿಂದ ಕ್ಲಾಕ್ ಟವರ್ ವೃತ್ತ ತಲುಪುವ ಸಮಯದ ವರೆಗೆ ವಾಹನ ಸಂಚಾರವನ್ನು ನಿಷೇಧಿಸಿದೆ.

2. ಸೆಂಟ್ರಲ್ ಮಾರ್ಕೆಟ್‌ನ ಫಾತಿಮಾ store ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ.

3. ಮೆರವಣಿಗೆಯು ಕ್ಲಾಕ್ ಟವರ್ ತಲುಪಿದ ತಕ್ಷಣ ಸಿಟಿ ಹಾಗೂ ಸರ್ವಿಸ್ ಬಸ್ಸು ನಿಲ್ದಾಣ ಕಡೆಯಿಂದ ಬರುವ ವಾಹನಗಳು ಕ್ಲಾಕ್ ಟವರ್ ನ ಬಳಿ ಬಲಕ್ಕೆ ತಿರುಗಿ ಹಂಪನಕಟ್ಟ – ಕ್ಲಾಕ್‌ಟವರ್ ರಸ್ತೆಯಲ್ಲಿ ಏಕ ಮುಖ ಸಂಚಾರಕ್ಕೆ ವಿರುದ್ಧವಾಗಿ ಹಂಪನಕಟ್ಟ ಜಂಕ್ಷನ ತನಕ ಸಂಚರಿಸಿ ನಂತರ ಎಡಕ್ಕೆ ತಿರುಗಿ ಎಲ್.ಹೆಚ್.ಹೆಚ್ ರಸ್ತೆ ಮುಖಾಂತರ ಮುಂದುವರಿಯುವುದು.

4. ಅಂಬೇಡ್ಕರ್ ವೃತ್ತದ ಕಡೆಯಿಂದ ಎಲ್.ಹೆಚ್.ಹೆಚ್ ಮೂಲಕ ಸಿಟಿ & ಸರ್ವಿಸ್ ಬಸ್ಸು ನಿಲ್ದಾಣ ಹಾಗೂ ನೆಹರೂ ಮೈದಾನದ ಕಡೆಗೆ ಬರುವ ಎಲ್ಲಾ ತರಹದ ವಾಹನಗಳು ಹಂಪನಕಟ್ಟ ಜಂಕ್ಷನ್ ಬಳಿ ಎಡಕ್ಕೆ ತಿರುಗಿ ರೈಲ್ವೇ ನಿಲ್ದಾಣದ ರಸ್ತೆಯ ಮುಖಾಂತರ ಯು.ಪಿ. ಮಲ್ಯ ರಸ್ತೆಗೆ ಬಂದು ಮುಂದುವರಿಯುವುದು.

5. ಪಿ.ಎಂ ರಾವ್ ರಸ್ತೆಯಲ್ಲಿ ಎಲ್ಲಾ ತರಹದ ವಾಹನ ಸಂಚಾರ ನಿಷೇದಿಸಿದೆ.

6. ಶರವು ಗಣಪತಿ ದೇವಸ್ಥಾನ ರಸ್ತೆಯಲ್ಲಿ ಎಲ್ಲಾ ತರಹದ ವಾಹನ ಸಂಚಾರ ನಿಷೇದಿಸಿದೆ.

7. ಕಾರ್‌ಸ್ಟ್ರೀಟ್ ಕಡೆಯಿಂದ ಅಂಬೇಡ್ಕರ್ ವೃತ್ತದ ಕಡೆಗೆ ಹೋಗುವ ಎಲ್ಲಾ ವಾಹನಗಳು ನವಭಾರತ ವೃತ್ತ ಹಾಗೂ ಯೆನಪೋಯ ಆಸ್ಪತ್ರೆಯ ಬಳಿಯ ವಿ.ಟಿ ರಸ್ತೆ (ಕರ್ನಾಟಕ ಬ್ಯಾಂಕ್) ಮೂಲಕ ಕೆ.ಎಸ್.ರಾವ್ ರಸ್ತೆಗೆ ಬಂದು ಕೋರ್ಟ್ ರಸ್ತೆ ಅಥವಾ ಸಿಟಿ ಸೆಂಟರ್ ರಸ್ತೆಯಾಗಿ ಮುಂದುವರಿಯುವುದು.

8. ಬಂಟ್ಸ್ ಹಾಸ್ಟೆಲ್ / ಕರಂಗಲಪಾಡಿ ಕಡೆಯಿಂದ ಪಿ.ವಿ.ಎಸ್ ಕಡೆಗೆ ಎಲ್ಲಾ ತರಹದ ವಾಹನಗಳ ಸಂಚಾರ ನಿಷೇಧಿಸಿದೆ. ಅಂಬೇಡ್ಕರ್ ವೃತ್ತದಿಂದ ಲಾಲ್‌ಬಾಗ್ ಕಡೆಗೆ ಹೋಗುವ ವಾಹನಗಳು ಕರಂಗಲಪಾಡಿ ರಸ್ತೆ ಹಾಗೂ ಅಂಬೇಡ್ಕರ್ ವೃತ್ತದಿಂದ ಕೆ.ಪಿ.ಟಿ ಕಡೆಗೆ ಹೋಗುವ ವಾಹನಗಳು ಕದ್ರಿ ಕಂಬಳ ರಸ್ತೆ ಮುಖಾಂತರ ಸಂಚರಿಸುವುದು.

9. ಕುದ್ರೋಳಿ ಕಡೆಯಿಂದ ಎಂ.ಜಿ. ರಸ್ತೆ ಕಡೆಗೆ ಬರುವ ಎಲ್ಲಾ ವಾಹನಗಳು ಮಣ್ಣಗುಡ್ಡೆ – ಸಂಘನಿಕೇತನ ರಸ್ತೆ ಮುಖಾಂತರ ನಾರಾಯಣ ಗುರು ವೃತ್ತ (ಲೇಡಿಹಿಲ್)ಕ್ಕೆ ಹೋಗಿ ಎಂ.ಜಿ ರಸ್ತೆ ಪ್ರವೇಶಿಸುವುದು.

10. ಕೆ.ಎಸ್.ಆರ್.ಟಿ.ಸಿ ಜಂಕ್ಷನ್‌ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಸದರಿ ವಾಹನಗಳು ಬಿಜೈ ಕಾಪಿಕಾಡ್ ಕಡೆಯಿಂದ ಕೊಟ್ಟಾರ ಕ್ರಾಸ್ ಮುಖೇನ ಸಂಚರಿಸುವುದು.

11. ನಾರಾಯಣ ಗುರು ವೃತ್ತ (ಲೇಡಿಹಿಲ್) ಹಾಗೂ ಮಣ್ಣಗುಡ್ಡೆ ರಸ್ತೆಯ ನಡುವಿನ ವಾಹನ ಸಂಚಾರವನ್ನು ನಿಷೇಧಿಸಿದೆ.

12. ಕುದ್ರೋಳಿ ಕೂಳೂರು ಫೆರ್ರಿ ರಸ್ತೆ ಕಡೆಯಿಂದ ಈ ಕೆಳಕಂಡ ರಸ್ತೆಗಳಲ್ಲಿ ಬಂದು ಎಂ.ಜಿ ರಸ್ತೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇದಿಸಿದೆ.
*ಪಿ.ವಿ.ಎಸ್ ಕಲಾಕುಂಜ ರಸ್ತೆ *ಕೋಡಿಯಾಲ್ ಗುತ್ತು ರಸ್ತೆ *ಟಿ.ಎಂ.ಎ ಪೈ ರಸ್ತೆ ಜಿ.ಜಿ ರಸ್ತೆ (ಪತ್ತು ಮುಡಿ ರಸ್ತೆ) *ಮಣ್ಣಗುಡ್ಡೆ ರಸ್ತೆ (ಬಲ್ಲಾಳ್‌ಬಾಗ್)
*ನೆಹರು ಅವೆನ್ಯೂ ರಸ್ತೆ
*ನೆಹರು ಅವೆನ್ಯೂ ಕ್ರಾಸ್ ರಸ್ತೆ (ಪಬ್ಬಾಸ್‌ನ ಬಳಿ)

ವಾಹನ ನಿಲುಗಡೆ ನಿಷೇಧಿಸಿರುವ ಸ್ಥಳಗಳು:-

1) ಮೆರವಣಿಗೆ ಸಾಗುವ ಪುರಭವನ – ಕ್ಲಾಕ್‌ಟವರ್ – ಕೆ.ಬಿ.ಕಟ್ಟೆ – ಹಂಪನಕಟ್ಟ – ಕೆ.ಎಸ್.ಅರ್ ರಾವ್ ರಸ್ತೆ – ನವಭಾರತ ವೃತ್ತ – ಪಿ.ವಿ.ಎಸ್ ವೃತ್ತ – ಎಂ.ಜಿ ರಸ್ತೆ (ಪಿ.ವಿ.ಎಸ್ ನಿಂದ ನಾರಾಯಣ ಗುರು ವೃತ್ತ) – ಮಂಗಳ ಕ್ರೀಡಾಂಗಣ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇದಿಸಿದೆ.

2) ನಾರಾಯಣ ಗುರು ವೃತ್ತ (ಲೇಡಿಹಿಲ್) ದಿಂದ ಮಣ್ಣಗುಡ್ಡದ ವರೆಗಿನ ಕೂಳೂರು ಫೆರ್ರಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇದಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *