ಮಂಗಳೂರು ಮಹಾನಗರಪಾಲಿಕೆಯ ಕೆಲವು ಪ್ರದೇಶಗಳಿಗೆ ಎಪ್ರಿಲ್ 1 ಹಾಗೂ 2 ರಂದು ನೀರು ಪೂರೈಕೆ ಸ್ಥಗಿತ

ಮಂಗಳೂರು ಮಾರ್ಚ್ 29: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಬೆಂದೂರು ನೀರು ಶುದ್ಧೀಕರಣ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ 50 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ 2 ಟ್ಯಾಂಕಿಗಳಲ್ಲಿನ ಸೋರುವಿಕೆಯಿಂದ ನೀರು ಪೋಲಾಗುತ್ತಿದ್ದು.

ತುರ್ತು ದುರಸ್ತಿಗಾಗಿ ದಿನಾಂಕ: 01-04-2019 ಹಾಗೂ 02-04-2019 ರಂದು 2ದಿನ ಪೂರ್ವಾಹ್ನ 8 ಗಂಟೆಯಿಂದ ಮರುದಿನ ರಾತ್ರಿ 12 ಗಂಟೆಯವರೆಗೆ ಒಟ್ಟು 48 ಗಂಟೆಗಳ ಕಾಲ ನೀರು ಸಂಗ್ರಹಣೆ ಸ್ಥಗಿತಗೊಳಿಸಬೇಕಾಗಿದ್ದು, ಸದ್ರಿ ಟ್ಯಾಂಕ್‍ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದ್ದ ಪ್ರದೇಶಗಳಾದ ಮೇರಿಹಿಲ್, ಪಚ್ಚನಾಡಿ, ಬೋಂದೆಲ್, ಬೊಲ್ಪುಗುಡ್ಡ, ಸೂಜಿಕಲ್, ದೇರೆಬೈಲ್, ಕೊಂಚಾಡಿ, ಬಾವುಟಗುಡ್ಡ, ಹಂಪನಕಟ್ಟ, ಆಕಾಶವಾಣಿ ಟ್ಯಾಂಕ್‍ನಿಂದ ಸರಬರಾಜಾಗುವ ಬಿಜೈ ನ್ಯೂ ರೋಡ್, ಕದ್ರಿ ಕಂಬ್ಳ, ಸಂಕೈಗುಡ್ಡ, ವ್ಯಾಸನಗರ, ನಂತೂರು, ಯೆಯ್ಯಾಡಿ ಇತ್ಯಾದಿ ಪ್ರದೇಶಗಳಿಗೆ ನೀರು ಸರಬರಾಜನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಆದುದರಿಂದ ಈ ತುರ್ತು ದುರಸ್ತಿ ಕೆಲಸಕ್ಕೆ ಸಾರ್ವಜನಿಕರು ಮಹಾನಗರಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಆಯುಕ್ತರ ಪ್ರಕಟಣೆ ತಿಳಿಸಿದೆ.

4 Shares

Facebook Comments

comments