ವಿದೇಶಗಳಿಂದ ಬಂದವರಿಂದ ಉಡುಪಿ ಜಿಲ್ಲೆಗೆ ಕೊರೊನಾ ಭಯ ಸದ್ಯಕ್ಕಿಲ್ಲ – ಉಡುಪಿ ಜಿಲ್ಲಾಧಿಕಾರಿ

ಉಡುಪಿ ಎಪ್ರಿಲ್ 6: ಉಡುಪಿ ಜಿಲ್ಲೆಗೆ ವಿದೇಶದಿಂದ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದು ಅವರೆಲ್ಲರ ಹೋಂ ಕ್ವಾಂರಟೈನ್ ಅವಧಿ ಮುಕ್ತಾಯವಾಗಿದ್ದು , ವಿದೇಶಗಳಿಂದ ಬಂದವರಿಂದ ನಮ್ಮ ಜಿಲ್ಲೆಗೆ ಕೊರೊನಾ ಭಯ ಸದ್ಯಕ್ಕಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ವಿದೇಶದಿಂದ ಬಂದ ಜನರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು, ಸದ್ಯ ವಿದೇಶಗಳಿಂದ ಬಂದವರಿಂದ ನಮ್ಮ ಜಿಲ್ಲೆಗೆ ಕೋರೋನಾ ಭಯ ಸದ್ಯಕ್ಕಿಲ್ಲ ಎಂದರು. ಕೊರೊನಾ ಪಾಸಿಟಿವ್ ಬಂದ ಮೂವರ ನಿಕಟವರ್ತಿಗಳು ಐಸೋಲೇಶನ್ ವಾರ್ಡ್ ನಲ್ಲಿದ್ದಾರೆ. ಅವರಲ್ಲಿ ಸದ್ಯ ಯಾರಲ್ಲೂ ರೋಗ ಲಕ್ಷಣಗಳು ಕಂಡುಬಂದಿಲ್ಲ. ಪ್ರಾಥಮಿಕ ಸಂಪರ್ಕ ಇದ್ದ ವ್ಯಕ್ತಿಗಳ ವರದಿ ನೆಗೆಟಿವ್ ಬಂದಿದ್ದು, ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದರು. ಲಾಕ್ ಡೌನ್ ಅವಧಿ ಮುಗಿಯುವವರೆಗೆ ಶಿಸ್ತು ಸಂಯಮ ಪಾಲಿಸಿ ಎಂದು ಮನವಿ ಮಾಡಿದರು.

ಇನ್ನು ಸಾರ್ವಜನಿಕರಿದೆ ಎಂದಿನಂತೆ ಬೆಳಿಗ್ಗೆ 7 ರಿಂದ 11:30 ಗೆ ಅಗತ್ಯ ವಸ್ತು ಖರೀದಿಗೆ ಮಾತ್ರ ಅವಕಾಶವಿದ್ದು, ಫ್ರೀಯಾಗಿ ಬೇಕಾಬಿಟ್ಟಿ ತಿರುಗುವುದು ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಲ್ಲದೆ ವಾಹನ ಜಪ್ತಿ ಮಾಡಲಾಗುವುದು ಎಂದರು. ಪಾಸಿಟಿವ್ ಬಂದ ಕಾರ್ಕಳದ ಮಹಿಳೆಯ ಜೊತೆ ಜಿಲ್ಲೆಯ 33 ಮಂದಿ ಪ್ರಯಾಣ ಮಾಡಿದ್ದರು. ಎಲ್ಲಾ 33 ಮಂದಿ ಆರೋಗ್ಯ ತಪಾಸಣೆ ಮಾಡಿದ್ದೇವೆ. ಎಲ್ಲರೂ ಆರಾಮಾಗಿದ್ದಾರೆ, ದೆಹಲಿ ಸಂಪರ್ಕದಲ್ಲಿದ್ದ ಎಲ್ಲಾ 16 ಮಂದಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದರು.

ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ದಾನಿಗಳು ನೆರವಿಗೆ ಧಾವಿಸಿದ್ದು, ಊಟೋಪಚಾರ ಮತ್ತು ದಿನಸಿಯನ್ನು ದಾನಿಗಳಿಂದ ನಿರ್ವಹಿಸಲಾಗಿದೆ. ಈವರೆಗೆ ಸರಕಾರದ ಯಾವುದೇ ಅನುದಾನ ಬಳಸಿಲ್ಲ ಎಂದರು.