LATEST NEWS
ಬಿ.ಎಂ ಫಾರುಕ್ ಹಾಗೂ ನನ್ನ ನಡುವೆ ಸಚಿವ ಸ್ಥಾನಕ್ಕಾಗಿ ಯಾವುದೇ ಸ್ಪರ್ಧೆ ಇಲ್ಲ – ಯು.ಟಿ ಖಾದರ್

ಬಿ.ಎಂ ಫಾರುಕ್ ಹಾಗೂ ನನ್ನ ನಡುವೆ ಸಚಿವ ಸ್ಥಾನಕ್ಕಾಗಿ ಯಾವುದೇ ಸ್ಪರ್ಧೆ ಇಲ್ಲ – ಯು.ಟಿ ಖಾದರ್
ಮಂಗಳೂರು ಮೇ 26: ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದ್ದು. ಸಚಿವ ಸ್ಥಾನದ ವಿಷಯದಲ್ಲಿ ಜೆಡಿಎಸ್ ಮುಖಂಡ ಬಿ.ಎಂ.ಫಾರುಕ್ ಹಾಗು ನನ್ನ ನಡುವೆ ಯಾವುದೇ ರೀತಿಯಲ್ಲಿ ಪೈಪೋಟಿ ಇಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಜೆಡಿಎಸ್ ಮುಖಂಡ ಬಿ.ಎಂ ಫಾರುಕ್ ನಾನು ಒಳ್ಳೆಯ ಸ್ನೇಹಿತರು. ಬಿ.ಎಂ.ಫಾರುಕ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಅದರೆ ನಮ್ಮ ನಡುವೆ ಸಚಿವ ಸ್ಥಾನಕ್ಕಾಗಿ ಯಾವುದೇ ಸ್ಪರ್ದೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಬಿಜೆಪಿ ವಿರುದ್ದ ಮಾಜಿ ಸಚಿವ ಯು.ಟಿ ಖಾದರ್ ಕಿಡಿಕಾರಿದ್ದಾರೆ. ರೈತರ ಸಾಲಮನ್ನಾ ವಿಚಾರದಲ್ಲಿ ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್ ರಾಜಕೀಯ ಗಿಮಿಕ್ ಎಂದು ಶಾಸಕ ಯು.ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯ ಮ ಗೋಷ್ಠೀಯಲ್ಲಿ ಮಾತನಾಡಿದ ಅವರು ಸಮ್ಮಿಶ್ರ ಸರಕಾರ ಈಗಷ್ಟೇ ರಚನೆಯಾಗಿದ್ದು, ಸಚಿವ ಸಂಪುಟವೇ ರಚನೆ ಆಗದೆ ಚರ್ಚೆಯೇ ನಡೆಯದೆ ಏಕಾಏಕಿ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಎಂದು ಒತ್ತಾಯಿಸುವುದು ಬಿಜೆಪಿಗೆ ಶೋಭೆ ತರುವಂತದ್ದಲ್ಲ ಎಂದು ಅವರು ಕಿಡಿಕಾರಿದರು.