UDUPI
ಉಡುಪಿ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಜುಲೈ29 ರವರೆಗೆ ಧಾರ್ಮಿಕ ಚಟುವಟಿಕೆ ಸ್ಥಗಿತ
ಉಡುಪಿ, ಜುಲೈ 15: ಕೊರೊನಾ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ 14 ದಿನಗಳ ಕಾಲ ಗಡಿಗಳನ್ನು ಸೀಲ್ ಡೌನ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಈ ಹಿನ್ನಲೆ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚ್ ಗಳಲ್ಲಿ ಜುಲೈ 15 ರಿಂದ ಎರಡು ವಾರಗಳ ಕಾಲ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ಇತರೆ ಧಾರ್ಮಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದ್ದಾರೆ.
ಉಡುಪಿಯ ಜಿಲ್ಲಾಡಳಿತವು ಜಿಲ್ಲಾ ಗಡಿಗಳನ್ನು ಜುಲೈ 15 ರಂದು ರಾತ್ರಿ 8 ರಿಂದ ಜುಲೈ 29 ರವರೆಗೆ ಸೀಲ್‌ಡೌನ್ ಮಾಡಲು ಆದೇಶಿಸಿದೆ. ಈ ಅವಧಿಯಲ್ಲಿ, ಎಲ್ಲಾ ಧಾರ್ಮಿಕ ಸಭೆಗಳು ಮತ್ತು ಸಾರ್ವಜನಿಕ ಆಚರಣೆಗಳನ್ನು ನಿಷೇಧಿಸಲಾಗಿದ್ದು, ಚರ್ಚ್, ದೇವಾಲಯ ಹಾಗೂ ಮಸೀದಿಗಳಿಗೆ ಖಾಸಗಿ ಭೇಟಿಗೆ ಮಾತ್ರ ಅವಕಾಶ ನೀಡಿದ್ದು, ಸಾರ್ವಜನಿಕ ಪೂಜೆ ಅಥವಾ ಧಾರ್ಮಿಕ ಚಟುವಟಿಕೆಗೆ ಅವಕಾಶವಿಲ್ಲ. ಆದ್ದರಿಂದ, ಜುಲೈ 29, 2020 ರವರೆಗೆ ಉಡುಪಿ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಪ್ರಾರ್ಥನೆ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ ಎಂದು ಸುತ್ತೊಲೆಯಲ್ಲಿ ತಿಳಿಸಿದ್ದಾರೆ.