LATEST NEWS
ಗೋಡ್ಸೆ ಅನುಯಾಯಿ ಯೋಗಿಯಿಂದ ಅಭಿವೃದ್ದಿ ಪಾಠ ಅಗತ್ಯವಿಲ್ಲ : ಸಿ ಎಂ ಸಿದ್ದರಾಮಯ್ಯ

ಗೋಡ್ಸೆ ಅನುಯಾಯಿ ಯೋಗಿಯಿಂದ ಅಭಿವೃದ್ದಿ ಪಾಠ ಅಗತ್ಯವಿಲ್ಲ : ಸಿ ಎಂ ಸಿದ್ದರಾಮಯ್ಯ
ಉಡುಪಿ,ಜನವರಿ 08: ಯುಪಿ ಜಂಗಲ್ ರಾಜ್ ಮತ್ತು ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ, ಗೋಡ್ಸೆ ಅನುಯಾಯಿ ಯೋಗಿಯಿಂದ ಅಭಿವೃದ್ದಿ ಪಾಠ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲನ್ಯಾಸ ನೆರವೇರಿಸಲು ಉಡುಪಿಗೆ ಆಗಮಿಸಿದ ಅವರು ಹೆಲಿಪ್ಯಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕರಾವಳಿಯ ಸದ್ಯದ ಪರಿಸ್ಥಿತಿ ಗೆ ಕೋಮುವಾದಿಗಳು ಕಾರಣರಾಗಿದ್ದಾರೆ. ಇದಕ್ಕೆಲ್ಲ ಕುಮ್ಮಕ್ಕು ನೀಡುವವರು ಸಂಘ ಪರಿವಾರದವರು. ಅವರ ಕುಮ್ಮಕ್ಕು ಬಿಟ್ರೆ ಯಾರೂ ಮಾಡಲ್ಲ. ಬಿಜೆಪಿ ಕೋಮುವಾದವನ್ನು ಬಿಡಬೇಕು. ಹಿಂದುತ್ವ ಆಹಾರದಿಂದ ಡಿವೈಡ್ ಆಗಲ್ಲ. ನಾವು ಹಿಂದೂ ವಿರೋಧಿ ಅಂದವರು ಯಾರು? ನಮ್ಮನ್ನು ದೂಷಿಸುವವರು ಹಿಂದೂಗಳೂ ಅಲ್ಲ ಮನುಷ್ಯರೂ ಅಲ್ಲ ಎಂದ ಮುಖ್ಯಮಂತ್ರಿಗಳು ಕೋಮುವಾದ ಬಿತ್ತರಿಸುತ್ತಿರುವ ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ ಎಂದರು.

ರಾಜ್ಯದಲ್ಲಿ ಪಿಎಫ್ ಐ, ಬಜರಂಗದಳ, ಶ್ರೀ ರಾಮಸೇನೆಯನ್ನು ನಿಷೇಧಿಸುವ ಚಿಂತನೆ ಇಲ್ಲ ಎಂದ ಮುಖ್ಯಮಂತ್ರಿಗಳು ಆದರೆ ಅವರ ಮೇಲೆ ನಿಗಾ ಇಡಲಾಗುವುದು ಎಂದರು. ಅಭಿವೃದ್ದಿಯಲ್ಲಿ ಕರ್ನಾಟಕ ನಂ 1 ಒನ್ ಸ್ಥಾನದಲ್ಲಿದೆ ಎಂದ ಅವರು ಉತ್ತರ ಪ್ರದೇಶ ಯಾವ ಸ್ಥಾನದಲ್ಲಿದೆ ಎಂದು ಸವಾಲು ಹಾಕಿದರು. ಯುಪಿ ಜಂಗಲ್ ರಾಜ್ ಮತ್ತು ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ. ಇಂಥಹ ಗೋಡ್ಸೆ ಅನುಯಾಯಿಯಿಂದ ಅಭಿವೃದ್ದಿ ಪಾಠ ಬೇಡ ಎಂದು ಖಾರವಾಗಿ ಹೇಳಿದರು.