LATEST NEWS
ಅಗಸ್ಟ್ 15 ರಂದು ಧ್ವಜ ಹಾರಿಸಲು ಮಂತ್ರಿಗಳೇ ಇಲ್ಲ – ಕೋಟ ಶ್ರೀನಿವಾಸ ಪೂಜಾರಿ
ಅಗಸ್ಟ್ 15 ರಂದು ಧ್ವಜ ಹಾರಿಸಲು ಮಂತ್ರಿಗಳೇ ಇಲ್ಲ
ಉಡುಪಿ ಜುಲೈ 31: ರಾಜ್ಯದ ಯಾವುದೇ ಜಿಲ್ಲೆಗಳಿಗೆ ಉಸ್ತುವಾರಿ ಮಂತ್ರಿ ನೇಮಕವಾಗಿಲ್ಲ. ಕನಿಷ್ಟ ಪಕ್ಷ ಆಗಸ್ಟ್ 15 ರಂದು ರಾಷ್ಟ್ರಧ್ವಜ ಹಾರಿಸಲು ಜನ ಬೇಕಲ್ವಾ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಹಾಗೂ ಕಾಂಗ್ರೇಸ್ ನ ಸರಕಾರ ಬಂದ ಮೇಲೆ ರಾಜ್ಯದ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಉಸ್ತುವಾರಿ ಮಂತ್ರಿ ನೇಮಕಕ್ಕೂ ಶಾಸ್ತ್ರ ನೋಡುವ ಪರಿಸ್ಥಿತಿ ಬಂದಿದೆ ಎಂದರು.
ಕರ್ನಾಟಕದಲ್ಲಿ ಎದ್ದಿರುವ ಪ್ರತ್ಯೇಕತೆಯ ಕೂಗಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರಣ, ಸಿಎಂ ಕುಮಾರಸ್ವಾಮಿ ಕರ್ನಾಟಕವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಕುಮಾರಸ್ವಾಮಿಗೆ ಕರ್ನಾಟಕವನ್ನು ಛಿದ್ರವಾಗಿ ನೋಡುವ ಅಸೆ ಇದೆಯೇ? ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಹೊಣೆಗೇಡಿತನದಿಂದ ಮಾತನಾಡುವುದನ್ನು ಬಿಡಬೇಕು, ಅಪಸ್ವರ, ಆಕ್ರೋಶ ಇದ್ದ ಜನ ಪ್ರತಿನಿಧಿಗಳನ್ನು ಕರೆಸಿ ಮಾತನಾಡಿ ಎಂದು ಅವರು ಸಲಹೆ ನೀಡಿದರು.
ಕಾಂಗ್ರೆಸ್ ಗೆ ಜೆಡಿಎಸ್ ಎಂಬ ಧೃತರಾಷ್ಟ್ರನ ಆಲಿಂಗನವಾಗಿದೆ. ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಂಡಿದೆ. ಕಾಂಗ್ರೆಸ್ ನ ಶಾಸಕರೇ ಮರುಗುತ್ತಿದ್ದಾರೆ. ಎಷ್ಟು ಜನ ಬಿಜೆಪಿಗೆ ಒಲವು ತೋರಿದ್ದಾರೆ ಅನ್ನೋ ಲೆಕ್ಕವನ್ನು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕೊಡುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಆದ ಅನ್ಯಾಯದಿಂದ ಶಾಸಕರು ಬಿಜೆಪಿಗೆ ಒಲವು ತೊರಿರಬಹುದು ಎಂದು ಹೇಳಿದರು.