Connect with us

    LATEST NEWS

    ಅಧಿಕೃತವಾಗಿ ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ಬಂದ್ ಮಾಡಿದ ಕೇಂದ್ರ ಸರಕಾರ

    ನವದೆಹಲಿ: ಕೊರೊನಾ ಬಂದ ನಂತರ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದ್ದ ಕೇಂದ್ರ ಸರಕಾರ ಇದೀಗ ಅಧಿಕೃತವಾಗಿಯೇ ಗೃಹ ಬಳಕೆಯ ಎಲ್‍ಜಿಪಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲ್ಲ ಎಂದು ಘೋಷಿಸಿದೆ.


    ಸಾಮಾನ್ಯ ಗ್ರಾಹಕರು ಮಾರ್ಕೆಟ್ ದರಕ್ಕೆ ಅಡುಗೆ ಅನಿಲವನ್ನು ಖರೀದಿ ಮಾಡಬೇಕಾಗುತ್ತದೆ. ಇಂಧನ ಇಲಾಖೆಯ ಕಾರ್ಯದರ್ಶಿ ಪಂಕಜ್ ಚೌಧರಿ ಮಾತನಾಡಿ, ಕೋವಿಡ್ ಶುರುವಾದ ದಿನದಿಂದ ಎಲ್‍ಪಿಜಿ ವಿನಿಯೋಗದಾರರಿಗೆ ಸಬ್ಸಿಡಿ ನೀಡಿಲ್ಲ. ಇನ್ಮುಂದೆಯೂ ಕೂಡ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹೊಂದಿದವರಿಗೆ ಮಾತ್ರ ಈಗ ಸಬ್ಸಿಡಿ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *