DAKSHINA KANNADA
ದಸರಾ ರಜೆ ನೀಡದ ಮಂಗಳೂರಿನ ಶಿಕ್ಷಣ ಸಂಸ್ಥೆಗಳ ವಿರುದ್ದ ಹಿಂದೂ ಸಂಘಟನೆಗಳು ಗರಂ
ದಸರಾ ರಜೆ ನೀಡದ ಮಂಗಳೂರಿನ ಶಿಕ್ಷಣ ಸಂಸ್ಥೆಗಳ ವಿರುದ್ದ ಹಿಂದೂ ಸಂಘಟನೆಗಳು ಗರಂ
ಮಂಗಳೂರು ಸೆಪ್ಟೆಂಬರ್ 27: ನಾಡ ಹಬ್ಬ ದಸರಾ ಹಬ್ಬಕ್ಕೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕ ಎಲ್ಲಾ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಇದೆ. ಆದರೆ ಮಂಗಳೂರಿನ ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆ ಸೇರಿದಂತೆ ಇತರ ಸಂಸ್ಥೆಯಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿಗೆ ರಜೆ ನೀಡಲಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಸಂಸ್ಥೆಯ ಈ ನಿಲುವಿನಿಂದಾಗಿ ನೂರಾರು ಸಿಬ್ಬಂದಿಗಳಿಗೆ ತೊಂದರೆ ಅನುಭವಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕುರಿತು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ರೋಹಿಂಗ್ಯಾ ಮುಸ್ಲಿಮರನ್ನು ಕೂಡಲೇ ಗಡಿಪಾರು ಮಾಡಿ
ಮಯನ್ಮಾರ್ ನಿಂದ ಭಾರತದೊಳಗೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರನ್ನು ಈ ಕೂಡಲೇ ಗಡಿಪಾರು ಮಾಡಬೇಕೆಂದು ವಿಶ್ವ ಹಿಂದು ಪರಿಷತ್ ಬಜರಂಗದಳ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ಮಯನ್ಮಾರ್ ನಿಂದ ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮುಸ್ಲಿಮರು ಭಾರತದ ಆಂತರಿಕ ಭದ್ರತೆಗೆ ಭಂಗ ತರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು .
ಮಯನ್ಮಾರ್ ನ ಹಿಂಸಾ ಪೀಡಿತ ರಖಿನಾ ಪ್ರಾಂತ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರು ಹಿಂದೂಗಳ ಸಾಮೂಹಿಕ ಹತ್ಯೆ ಮಾಡಿರುವುದು ಈಗಾಗಲೇ ಬಯಲಾಗಿದೆ. ಈ ಮೂಲಕ ಮುಗ್ಧರೆಂದು ಹೇಳಲಾಗುವ ರೋಹಿಂಗ್ಯಾ ಮುಸ್ಲಿಮರ ಬರ್ಬರತೆ ಬೆಳಕಿಗೆ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು .
ಹಿಂದೂಗಳು ಮತ್ತು ಬೌದ್ಧರನ್ನು ಗುರಿಯಾಗಿಸಿಕೊಂಡು ನಡೆದ ಹಿಂಸಾಚಾರಕ್ಕೆ ಪ್ರತಿಯಾಗಿ ನಡೆಸಿದ ದಾಳಿಗೆ ಸಾವಿರಾರು ರೋಹಿಂಗ್ಯಾ ಭಯೋತ್ಪಾದಕರು ಭಾರತಕ್ಕೆ ನುಸುಳಿದ್ದಾರೆ ಇಂತಹ ತೀವ್ರವಾದಿ ಮಾನಸಿಕತೆ ಇರುವ ರೋಹಿಂಗ್ಯಾ ಮುಸ್ಲಿಮರಿಗೆ ಭಾರತ ಆಶ್ರಯ ನೀಡಿದೆ ಈ ಕೂಡಲೇ ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದರು .