LATEST NEWS
ಹೋದಲ್ಲಿ ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬಸವರಾಜ್ ಬೊಮ್ಮಾಯಿ

ಉಡುಪಿ ಅಗಸ್ಟ್ 12:ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಉಡುಪಿಗೆ ಮೊದಲಬಾರಿಗೆ ಆಗಮಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ನಾನು ಹೋದಲ್ಲಿ, ಬಂದಲ್ಲಿ ಕಟೌಟ್ ಹಾಕಬೇಡಿ. ಶುಭಕೋರುವ ಹೋರ್ಡಿಂಗ್ ಯಾರೂ ಹಾಕಬೇಡಿ ಎಂದು ಪಕ್ಷದವರಿಗೆ ಮತ್ತು ಅಭಿಮಾನಿಗಳಿಗೆ ನಾನು ಮನವಿ ಮಾಡಿದ್ದಾರೆ. ಈ ಮೂಲಕ ಜನತಾ ಪರಿವಾರದ ಸರಳತೆಯನ್ನು ಮತ್ತೆ ತೋರಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನು ಈ ನಾಡಿನ ಸೇವಕ. ಮುಖ್ಯಮಂತ್ರಿ ಆದರೂ ಈ ನಾಡಿನ ಸೇವಕ. ಈ ಭಾವನೆ ಕಟೌಟ್ ಹೋರ್ಡಿಂಗ್ ನಿಂದ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೇನೆ ಎಂದರು.

ಹೂವಿನ ವ್ಯಾಪಾರಿಗಳಿಗೆ ತೊಂದರೆ ಕೊಡಬೇಕು ಎಂಬುದು ನನ್ನ ಉದ್ದೇಶ ಅಲ್ಲ. ಖಾಸಗಿ ಕಾರ್ಯಕ್ರಮದಲ್ಲಿ ಹೂವು, ಹಾರ ತುರಾಯಿ ಬಳಸಬಹುದು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಹೂಗುಚ್ಚ, ಹಾರ, ತುರಾಯಿ ಬೇಡ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಜಾಗದಲ್ಲಿ ಗಾರ್ಡ್ ಆಫ್ ಹಾನರ್ ಬೇಡ. ಬೆಂಗಳೂರಿಗೆ ಹೋದ ತಕ್ಷಣ ಆದೇಶವನ್ನು ಹೊರಡಿಸುತ್ತೇನೆ. ಪೊಲೀಸ್ ಸಮಾರಂಭದಲ್ಲಿ ಗೌರವ ವಂದನೆ ಕೊಟ್ಟರೆ ಸಾಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.