Connect with us

LATEST NEWS

ಸದ್ಯಕ್ಕೆ ಉಡುಪಿ ಶ್ರೀಕೃಷ್ಣನ ದರ್ಶನ ಭಾಗ್ಯ ಇಲ್ಲ…..!!

ಸದ್ಯಕ್ಕೆ ಉಡುಪಿ ಶ್ರೀಕೃಷ್ಣನ ದರ್ಶನ ಭಾಗ್ಯ ಇಲ್ಲ…..!!

ಉಡುಪಿ ಮೇ 29: ಲಾಕ್ ಡೌನ್ 4.0 ನಡುವೆ ರಾಜ್ಯಸರಕಾರ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಿದೆ. ಈ ಹಿನ್ನಲೆ ಈಗಾಗಲೇ ದೇವಸ್ಥಾನಗಳಲ್ಲಿ ಭಕ್ತರ ಬರ ಮಾಡಿಕೊಳ್ಳಲು ಸಕಲ ಸಿದ್ದತೆ ನಡೆಯುತ್ತಿದೆ. ಆದರೆ ಜೂನ್ 1 ರಿಂದ ರಾಜ್ಯದ ದೇವಸ್ಥಾನಗಳು ದರ್ಶನಕ್ಕೆ ಅವಕಾಶ ನೀಡಿದರೂ ಸಹ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುಂದಿನ 10-15 ದಿನಗಳ ಕಾಲ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ. 15 ದಿನಗಳ ಬಳಿಕ ಕ್ಷೇತ್ರ ದರ್ಶನದ ಅವಕಾಶದ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದೆಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

15 ದಿನಗಳ ನಂತರ ಆ ಸಂದರ್ಭಾನುಸಾರ ಕೊರೊನಾ ಪರಿಣಾಮವನ್ನು ಗಮನಿಸಿ ಇತರ ಮಠಾಧೀಶರು ಸಹಮತ ಮತ್ತು ಸಲಹೆ ಸೂಚನೆಯನ್ನು ಅನುಸರಿಸಿ ಹಿಂದಿನ ದಿನಗಳಂತೆಯೇ ಭಕ್ತರಿಗೆ ಮುಕ್ತವಾಗಿ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಶ್ರೀ ಅದಮಾರು ಮಠದ ಪೀಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪರ್ಯಾಯ ಅದಮಾರು ಮಠ ಪ್ರಸಕ್ತ ಕೊರೊನಾ ಕೋವಿಡ್-19 ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠ ಪರಂಪರೆ ಉಳಿಸುವ ದೃಷ್ಟಿಯಿಂದ ಈ ದಿನಗಳಲ್ಲಿ ಭಕ್ತರಿಗೆ ಶ್ರೀಕೃಷ್ಣಮಠದ ಒಳಗೆ ಪ್ರವೇಶ ನೀಡದೆ ಪ್ರಧಾನ ಮಂತ್ರಿಗಳ ಮತ್ತು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿಕೊಂಡು ಬಂದಿದೆ. ಶ್ರೀಕೃಷ್ಣ ಭಕ್ತರು ಹೊರಗಡೆಯಿಂದ ದರ್ಶನಕ್ಕೆ ವ್ಯವಸ್ಥೆ ಇದ್ದು ಭಕ್ತರು ಸಹಕಾರವನ್ನು ನೀಡಿದ್ದಾರೆ. ಶ್ರೀಕೃಷ್ಣಮಠದಲ್ಲಿ ಅಗತ್ಯ ಸೇವಾ ಪರಿಚಾರಕರು ಮಾತ್ರ ಒಳಗೆ ಇದ್ದು ಪೂಜಾ ಕೈಂಕರ್ಯ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *