LATEST NEWS
ಮಂಗಳೂರು – ಇಂದು ಸಂಜೆ 7 ರಿಂದ ಬೀಚ್ ಗಳಿಗೆ ಪ್ರವೇಶ ನಿರ್ಬಂಧ

ಮಂಗಳೂರು ಡಿಸೆಂಬರ್ 31: ಓಮಿಕ್ರಾನ್ ಆತಂಕದ ನಡುವೆ ಮಂಗಳೂರು ಬೀಚ್ ಗಳಲ್ಲಿ ಹೊಸ ವರ್ಷಾಚರಣೆ ನಡೆಯುವ ಸಾಧ್ಯತೆ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಸೇರಿದಂತೆ ಮಂಗಳೂರಿನ ಪ್ರಮುಖ ಬೀಚ್‌ಗಳಿಗೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಇಂದು ಡಿಸೆಂಬರ್ 31ರ ಶುಕ್ರವಾರದಂದು ಸಂಜೆ 7 ಗಂಟೆಯ ಬಳಿಕ ಹೋಗುವುದು ಹಾಗೂ ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ. ವಿ ಹೇಳಿದ್ದಾರೆ.
