Connect with us

LATEST NEWS

ಯುಪಿಐ ವಹಿವಾಟುಗಳ ಮೇಲೆ ಚಾರ್ಜ್ ಮಾಡ್ತಾರಾ?

ಬೆಂಗಳೂರು, ಜನವರಿ 02 :‌ ದೇಶದಲ್ಲಿ ಎಲ್ಲಾ ಹಣದ ವ್ಯವಹಾರ ಡಿಜಿಟಲೀಕರಣಗೊಳ್ಳಬೇಕೆಂಬ ಕಾರಣದಿಂದ ಆರಂಭವಾದ ಯುಪಿಐ ಜನವರಿ 1, 2021ರಿಂದ ವಹಿವಾಟುಗಳ ಮೇಲೆ ಹೆಚ್ಚಿನ ಚಾರ್ಜ್ ಮಾಡಲಾಗುತ್ತದೆ ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಆದ್ರೆ, ಈ ಸುದ್ದಿಯಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಅನ್ನೋದನ್ನ ಸ್ವತಃ ಎನ್ ಪಿಸಿಐ ಸ್ಪಷ್ಟಪಡಿಸಿದೆ.

ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಇಂತಹ ತಪ್ಪು ಮಾಹಿತಿಗಳಿಗೆ ಬಲಿಯಾಗದಂತೆ ಮನವಿ ಮಾಡಿದೆ. ಇನ್ನು ಕಲ್ಪನಿಕ ಕಥೆಗಳನ್ನ ನಂಬಬೇಡಿ ಮತ್ತು ನಿರಂತರ ಮತ್ತು ಅನುಕೂಲಕರವಾದ ಯುಪಿಐ ವಹಿವಾಟುಗಳನ್ನ ಮುಂದುವರಿಸಿ ಎಂದು ಎಲ್ಲಾ ಗ್ರಾಹಕರಿಗೆ ಎನ್ ಪಿಸಿಐ ಮನವಿ ಮಾಡಿದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ಅನ್ನ ಭಾರತದಲ್ಲಿ ಚಿಲ್ಲರೆ ಪಾವತಿಗಳು ಮತ್ತು ಸೆಟಲ್ ಮೆಂಟ್ ಸಿಸ್ಟಮ್ʼಗಳನ್ನ ನಿರ್ವಹಿಸುವ ಒಂದು ಸಂಸ್ಥೆಯಾಗಿ 2008ರಲ್ಲಿ ಅಳವಡಿಸಲಾಯಿತು.

ಎನ್ ಪಿಸಿಐ ದೇಶದಲ್ಲಿ ಸದೃಢವಾದ ಪಾವತಿ ಮತ್ತು ವಸತಿ ಮೂಲ ಸೌಕರ್ಯವನ್ನ ಸೃಷ್ಟಿಸಿದೆ. ಭಾರತದಲ್ಲಿ ಚಿಲ್ಲರೆ ಪಾವತಿ ಉತ್ಪನ್ನಗಳಾದ ರುಪೇ ಕಾರ್ಡ್, ತಕ್ಷಣ ಪಾವತಿ ಸೇವೆ (ಐಎಂಬಿಎಸ್), ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ (ಯುಪಿಐ), ಭಾರತ್ ಇಂಟರ್ ಫೇಸ್ ಫಾರ್ ಮನಿ (ಭೀಮ್), ಭೀಮ್ ಆಧಾರ್, ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (NETC Fastag) ಮತ್ತು ಭಾರತ್ ಬಿಲ್ ಪೇ ಮುಂತಾದ ಚಿಲ್ಲರೆ ಪಾವತಿ ಉತ್ಪನ್ನಗಳ ಮೂಲಕ ಪಾವತಿ ಮಾಡುವ ವಿಧಾನವನ್ನ ಅದು ಬದಲಾಯಿಸಿದೆ. ಎನ್ ಪಿಸಿಐ ಯು ಯುಪಿಐ 2.0 ಅನ್ನ ಸಹ ಬಿಡುಗಡೆ ಮಾಡಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಹೆಚ್ಚು ಸುರಕ್ಷಿತ ಮತ್ತು ಸಮಗ್ರ ಸೇವೆಗಳನ್ನ ಒದಗಿಸ್ತಿದೆ.

ಚಿಲ್ಲರೆ ಪಾವತಿ ವ್ಯವಸ್ಥೆಗಳಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಹೊಸ ಆವಿಷ್ಕಾರಗಳನ್ನ ತರುವತ್ತ ಎನ್ ಪಿಸಿಐ ಗಮನ ಹರಿಸಿದೆ ಮತ್ತು ಭಾರತವನ್ನ ಡಿಜಿಟಲ್ ಅರ್ಥವ್ಯವಸ್ಥೆಯಾಗಿ ಪರಿವರ್ತಿಸಲು ಶ್ರಮಿಸುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *