DAKSHINA KANNADA
ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಕೋಮು ಸಂಘರ್ಷಗಳಿಗೆ ಅವಕಾಶವಿಲ್ಲ :ಉಮೇಶ್ ಟಿ, ಕರ್ಕೇರಾ ಹೊಸಬೆಟ್ಟು
ಮಂಗಳೂರು ಮೀನುಗಾರಿಕಾ ಧಕ್ಕೆಯಲ್ಲಿ ಎಲ್ಲಾ ಜಾತಿ ಸಮುದಾಯವರು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಕಳೆದ ಅನೇಕ ದಶಕಗಳಿಂದ ಕೋಮು ಸೌಹಾರ್ದತೆಯನ್ನು ಉಳಿಸಿಕೊಂಡು ಬಂದಿದೆ.
ಮಂಗಳೂರು : ಮಂಗಳೂರು ಮೀನುಗಾರಿಕಾ ಧಕ್ಕೆಯಲ್ಲಿ ಎಲ್ಲಾ ಜಾತಿ ಸಮುದಾಯವರು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಕಳೆದ ಅನೇಕ ದಶಕಗಳಿಂದ ಕೋಮು ಸೌಹಾರ್ದತೆಯನ್ನು ಉಳಿಸಿಕೊಂಡು ಬಂದಿದೆ.
ಆದ್ದರಿಂದ ಇಲ್ಲಿ ಯಾವುದೇ ಕೋಮು ಗೊಂದಲಗಳಿಗೆ ಆಸ್ಪದವಿಲ್ಲ.
ಈದ್ ಮಿಲಾದ್ ರಜೆ ಬ್ಯಾನರ್ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಅಧ್ಯಕ್ಷರಾದ ಉಮೇಶ್ ಟಿ, ಕರ್ಕೇರಾ ಹೊಸಬೆಟ್ಟು ಅವರು ಶತಮಾನದ ಇತಿಹಾಸವಿರುವ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಹಿಂದೂ, ಮುಸ್ಲೀಂ ಮತ್ತು ಕ್ರೈಸ್ತರು ಅನ್ಯೋನ್ಯತೆ ಮತ್ತು ಸೋದರತೆಯಿಂದ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದೆ,
ಮೂರು ಸಮುದಾಯ ಪ್ರಮುಖ ಹಬ್ಬ ಹರಿದಿನಗಳಿಗೆ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಸಾಮೂಹಿಕವಾಗಿ ರಜೆ ನೀಡಲಾಗುತ್ತಿದ್ದು, ಕಳೆದ ಅನೇಕ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ.
ಇದರಲ್ಲಿ ಯಾವುದೇ ಗೊಂದಲಗಳು ಇದುವರೆಗೂ ಆಗಿಲ್ಲ, ಈ ಬಾರಿ ಇದು ಯಾವ ಕಾರಣಕ್ಕೆ ಈ ಗೊಂದಲ ಸೃಷ್ಟಿಯಾಯಿತು ಗೊತ್ತಿಲ್ಲ. ಈ ಬಗ್ಗೆ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.