LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ ನೋ ಅನೌನ್ಸ್ ಮೆಂಟ್

ಮಂಗಳೂರು ಮೇ 02: ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಸೈಲೆಂಟ್ ಆಗಲಿದೆ. ಈವರೆಗೆ ಪ್ರಯಾಣಿಕರಿಗೆ ಮಾಹಿತಿಗಾಗಿ ಬಳಸಲಾಗುತ್ತಿದ್ದ ಲೌಡ್ ಸ್ಪೀಕರ್ ಘೋಷಣೆಗಳನ್ನು ನಿಲ್ಲಿಸಲಾಗುತ್ತಿದ್ದು, ಕೇವಲ ಎಲೆಕ್ಟ್ರಾನಿಕ್ಸ್ ಡಿಸ್‌ಪ್ಲೇಗಳಲ್ಲಿ ಮಾತ್ರ ಪ್ರಯಾಣಿಕರಿಗೆ ಮಾಹಿತಿ ತಿಳಿಸಲಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ಲೌಡ್ ಸ್ಪೀಕರ್ ಘೋಷಣೆಗಳಿಂದ ಪ್ರಯಾಣಿಕರಿಗೆ ಇದರಿಂದ ಕಿರಿಕಿರಿಯಾಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ವಿಮಾನ ಆಗಮನ- 1 ನಿರ್ಗಮನ, ವಿಳಂಬ ಸಹಿತ ವಿವಿಧ ಮಾಹಿತಿಯನ್ನು ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲಿರುವ ಡಿಸ್‌ಪ್ಲೇ ಮೂಲಕ ಪಡೆಯಬಹುದಾಗಿದೆ. ವಿಮಾನ ನಿಲ್ದಾಣದ ಒಳಭಾಗ ಮತ್ತು ಹೊರಭಾಗಗಳಲ್ಲಿ ದೊಡ್ಡ ಡಿಸ್ ಪ್ಲೇಯನ್ನು ಇರಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ‘ಮೇ ಐ ಹೆಲ್ಸ್ ಯು’ ಡೆಸ್ಕ್ ಸ್ಥಾಪಿಸಲಾಗಿದ್ದು, ಅಲ್ಲಿ ಸಿಬ್ಬಂದಿ, ಕಾರ್ಯನಿರ್ವಾಹಕರು ಸಹಾಯಕ್ಕೆ ಇರಲಿದ್ದಾರೆ. ಎಲ್ಲ ಏರ್‌ಲೈನ್ಸ್ ಚೆಕ್ – ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿಯೂ ವಿಮಾನದ ಮಾಹಿತಿ ಪಡೆಯಲು ಸಾಧ್ಯವಿದೆ.

ತಡೆರಹಿತ ಪ್ರಯಾಣದ ಮಾಹಿತಿಗೆ ಸಹಾಯ, ಬೋರ್ಡಿಂಗ್, ಗೇಟ್ ಬದಲಾವಣೆ, ವಿಮಾನದ ಮರು ವೇಳಾಪಟ್ಟಿ ಮುಂತಾದ ವಿಷಯಗಳು ಏರ್ ಲೈನ್‌ನಿಂದ ಪ್ರಯಾಣಿಕರ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ಇ-ಮೈಲ್ ಸಂದೇಶ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.