FILM
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ – ನೀರಿನೊಳಗೆ ಲಿಪ್ ಟು ಲಿಪ್ ಕಿಸ್ ವಿಡಿಯೋ ವೈರಲ್

ಬೆಂಗಳೂರು ಜೂನ್ 02: ಖ್ಯಾತ ಗಾಯಕ ಚಂದನ್ ಶೆಟ್ಟಿ ಮತ್ತು ಕಿರುತೆರೆ ನಟಿ ಹಾಗೂ ಚಂದನ್ ಪತ್ನಿ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಪ್ರವಾಸದಲ್ಲಿರುವ ದಂಪತಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಂಡರ್ ವಾಟರ್ ಶೂಟ್ ಮಾಡಿದ್ದು, ನೀರಿನೊಳಗೆ ರೊಮ್ಯಾನ್ಸ್ ಮಾಡಿದ್ದಾರೆ.

ಅಂಡರ್ ವಾಟರ್ ನಲ್ಲಿ ತುಟಿಗೆ ತುಟಿ ಬೆರೆಸಿ ರೊಮ್ಯಾಂಟಿಕ್ ಆಗಿ ವಿಡಿಯೋ ಶೂಟ್ ಮಾಡಿದ್ದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಚಂದನ್ ಶೆಟ್ಟಿ. ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ಸ್ ಬರುತ್ತಿವೆ. ಕೆಲವರು ಸಪೋರ್ಟ್ ಮಾಡಿದರೆ ಇನ್ನೂ ಕೆಲವರು ಖಾಸಗಿ ಸಂಗತಿಗಳನ್ನು ಬಹಿರಂಗವಾಗಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.