LATEST NEWS
ನಿತಾರಿ ಹತ್ಯಾಕಾಂಡದ ಪ್ರಮುಖ ಆರೋಪಿ ಕೋಲಿ, ಪಂಧೇರನ್ನು ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್..!

ನವದೆಹಲಿ : ದೇಶದಲ್ಲಿ ಭಾರಿ ತಲ್ಲಣ ಉಂಟುಮಾಡಿದ್ದ ನಿತಾರಿ ಅತ್ಯಾಚಾರ ಮತ್ತು ನಿಗೂಢ ಸರಣಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುರೇಂದ್ರ ಕೋಲಿ ಮತ್ತು ಮಣಿಂದರ್ ಸಿಂಗ್ ಪಂಧಾರ್ ರನ್ನು ಖುಲಾಸೆಗೊಳಿಸಿ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
2007ರಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣ ಸಂಬಂಧ ಉದ್ಯಮಿ ಪಂಧೇರ್ ಮತ್ತು ಆತನ ಮನೆಕೆಲಸದಾತ ಕೋಲಿ ವಿರುದ್ಧ 19 ಪ್ರಕರಣಗಳು ದಾಖಲಾಗಿ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿತ್ತು.

ದಾಖಲಾದ ಒಟ್ಟು 19 ಪ್ರಕರಣಗಳಲ್ಲಿ ಸಿಬಿಐ 16 ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ ಮೂರು ಪ್ರಕರಣಗಳು ರದ್ದುಗೊಂಡಿದ್ದವು.
2005ರಲ್ಲಿ ನೋಯ್ಡಾದ ಸೆಕ್ಟರ್ 31ರಲ್ಲಿ ಇರುವ ಕೊಲಿಯ ಉದ್ಯೋಗದಾತ ಮೊಂನೀದರ್ ಸಿಂಗ್ ಪಂದೇರ್ ಮನೆ ಹೊರಗಿಂದ ಬಾಲಕಿ ಕಾಣೆಯಾಗಿದ್ದಳು.
ಈ ಸಂಬಂಧ ಆಕೆಯ ತಂದೆ ಸ್ಥಳೀಯ ಪೊಲೀಸರಲ್ಲಿ ದೂರು ನೀಡಿದ್ದರು. 2006ರಲ್ಲಿ ಮನೆಯ ಸಮೀಪದ ಚರಂಡಿಯಲ್ಲಿ ಬಾಲಕಿಯ ಅಸ್ತಿಪಂಜರಗಳು ದೊರೆತಿದ್ದವು.
ಹಲವು ಬಾಲಕಿಯರನ್ನು ಕೊಲೆ ಮಾಡಿರುವುದಾಗಿ ಕೊಲಿ ಒಪ್ಪಿಕೊಂಡು ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯ ಹಿಂಬದಿಯ ಚರಂಡಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದ.
ಅತ್ಯಾಚಾರ, ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 2009 ಫೆಬ್ರವರಿ ಹಾಗೂ 2009 ಸೆಪ್ಟೆಂಬರ್, 2010 ಮೇ ಹಾಗೂ 2010 ಡಿಸೆಂಬರ್ನಲ್ಲಿ ಕೊಲಿಗೆ ಗಲ್ಲು ಮರಣದಂಡನೆ ವಿಧಿಸಲಾಗಿತ್ತು.