Connect with us

FILM

ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಪ್ರಿಯಾಂಕಾ ಚೋಪ್ರಾ….!!

ಬೆಂಗಳೂರು:ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಗಾಯಕ ನಿಕ್ ಜನಾಸ್ ಅವರು 2018ರಲ್ಲಿ ಮದುವೆಯಾಗಿದ್ದ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮಗುವನ್ನು ಹೊಂದುವುದು ನನ್ನ ಜೀವನದ ಅಮೂಲ್ಯ ಕ್ಷಣ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು, ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಹಾಗು ಅವರ ಪತಿ ಗಾಯಕ ನಿಕ್ ಜೊನಾಸ್ ಅವರು ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ಮಗು ಪಡೆದಿದ್ದಾರೆ.


ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ, ‘ನಾವು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈಗ ನಮ್ಮ ಕುಟುಂಬದ ಮೇಲೆ ಗಮನ ಹರಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಆದರೆ, ಮಗು ಗಂಡೋ? ಹೆಣ್ಣೋ? ಎಂಬುದನ್ನು ಪ್ರಿಯಾಂಕಾ ಖಚಿತಪಡಿಸಿಲ್ಲ.

Advertisement
Click to comment

You must be logged in to post a comment Login

Leave a Reply