LATEST NEWS
ನೈಸ್ ಡೀಲಿಂಗ್ ವಿತ್ ಕಾಂಗ್ರೇಸ್ – ಜಗದೀಶ್ ಶೆಟ್ಟರ್

ನೈಸ್ ಡೀಲಿಂಗ್ ವಿತ್ ಕಾಂಗ್ರೇಸ್ – ಜಗದೀಶ್ ಶೆಟ್ಟರ್
ಉಡುಪಿ ಮಾರ್ಚ್ 6: ಅಶೋಕ್ ಖೇಣಿ ಬಗ್ಗೆ ಟೀಕೆ ಮಾಡಿದ ಸಿದ್ದರಾಮಯ್ಯನವರು ಈಗ ಅದೇ ಅಶೋಕ್ ಖೇಣಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ನಿನ್ನೆ ಸಿದ್ದರಾಮಯ್ಯ ಭೇಟಿ ಮಾಡಿ ನೈಸ್ ಡೀಲಿಂಗ್ ಮಾಡಿಕೊಂಡಿದ್ದಾರೆ, ಅಂದ್ರೆ ನೈಸ್ ಡೀಲಿಂಗ್ ವಿತ್ ಕಾಂಗ್ರೆಸ್ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟಿ ಲೇವಡಿ ಮಾಡಿದ್ದಾರೆ.
ಕಾಪುವಿನಲ್ಲಿ ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗಧೀಶ್ ಶೆಟ್ಟರ್, ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ, ರಾಜ್ಯದ ಕೆಟ್ಟ ನಡವಳಿಕೆಯ ,ಅಹಂಕಾರಿ ,ದುರಹಂಕಾರಿ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡದಿದ್ರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ, ಮೋದಿ ಅವರನ್ನು ಟೀಕೆ ಮಾಡಿದಷ್ಟು ಹಾನಿ ಆಗುವುದು ಕಾಂಗ್ರಸ್ ಗೆ ಎಂದು ಹೇಳಿದರು.

ಕಾಂಗ್ರೇಸ್ ನ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಎಷ್ಟು ಸಲ ಬಂದ್ರೂ ಸ್ವಾಗತ ,ಅವರು ಹೋದಲ್ಲೆಲ್ಲ ಕಾಂಗ್ರೆಸ್ ಸೋಲುತ್ತೆ ಎಂದು ಹೇಳಿದರು, ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದ ಜಗದೀಶ್ ಶೆಟ್ಟರ್ ಉಡುಪಿ ಜಿಲ್ಲೆಗೆ ಐದಾರು ಬಾರಿ ಬಂದ ಮುಖ್ಯಮಂತ್ರಿ ಕೃಷ್ಣಮಠಕ್ಕೆ ಬಂದಿಲ್ಲ ಕಾಲಿಟ್ಟಿಲ್ಲ, ಈಗ ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಬಂದರೆ ಬರ್ತಾರಾ? ಎಂದು ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.