DAKSHINA KANNADA
ಸರ್ಕಾರದ ಕಾಟಾಕಾಚಾರಕ್ಕೆ ತನಿಖೆಯನ್ನು NIA ಗೆ ನೀಡಿದೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ
ಪುತ್ತೂರು, ಆಗಸ್ಟ್ 01: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಪ್ರತಿಕ್ರಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಪ್ರವೀಣ್ ಕುಟುಂಬ ಭೇಟಿ ಮಾಡಿದ್ದೇನೆ, ಸಮಸ್ಯೆ ಚರ್ಚೆ ಮಾಡಿದ್ದೇನೆ. ಪ್ರವೀಣ್ ಪತ್ನಿ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಿ ಅಂದಿದ್ದಾರೆ, ಕಾಟಾಚಾರಕ್ಕೆ ತನಿಖೆ ಮಾಡಬೇಡಿ ದೊಡ್ಡ ಶಕ್ತಿ ಇದ್ದರೂ ಕಠಿಣ ಕ್ರಮ ಕೈಗೊಳ್ಳಿ, ಅನುಕಂಪ ಮಾತಾಡಿದ್ರೆ ಸಾಕಾಗಲ್ಲ. ನಾವು ಐದು ಲಕ್ಷ ಪರಿಹಾರ ನೀಡಿದ್ದೇವೆ. ವಿಧವೆ ತಂಗಿಯನ್ನು ಇವರೇ ಸಾಕುತ್ತಿದ್ದಾರೆ. ಕುಟುಂಬದಲ್ಲಿ ಕಷ್ಟದ ಪರಿಸ್ಥಿತಿ ಇದೆ, ನಾನು ನನ್ನ ದೂರವಾಣಿ ನಂಬರ್ ನೀಡಿದ್ದೆನೆ. ಸಮಸ್ಯೆ ಆದಾಗ ತಿಳಿಸಿ ಅಂದಿದ್ದೇನೆ.
ಸರ್ಕಾರದ ಕಾಟಾಕಾಚಾರಕ್ಕೆ ತನಿಖೆಯನ್ನು NIA ಗೆ ನೀಡಿದೆ. ನಮ್ಮ ರಾಜ್ಯದಲ್ಲೂ ಉತ್ತಮ ಅಧಿಕಾರಿಗಳು ಇದ್ದಾರೆ, NIA ಯಲ್ಲಿ ಇಲ್ಲಿವರೆಗೆ ಎಷ್ಟು ಪರಿಹಾರ ಸಿಕ್ಕಿದೆ?. NIA ಕೊಟ್ಟು ತಮ್ಮ ಜವಾಬ್ಧಾರಿ ಕಳೆದುಕೊಳ್ಳುತ್ತಾರೆ, ಅವರಿಗೆ ಈಗ ತನಿಖೆ ವರ್ಗಾವಣೆ ಮಾಡಿದ್ರೆ ನಮ್ಮ ಪೊಲೀಸರು ವಿಫಲ ಆಗಿದ್ದಾರ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಮಸೂದ್ ಹತ್ಯೆ ಪ್ರಕರಣ
ಸಿಎಂ ಪ್ರವೀಣ್ ಮನೆಗೆ ಬಂದು ಮಸೂದ್ ಮನೆಗೆ ಬರದೇ ಇದ್ದ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮುಖ್ಯಮಂತ್ರಿ ಈ ರೀತಿಯ ಧೋರಣೆ ಬೇಜವಾಬ್ದಾರಿ ಸರಿಯಲ್ಲ, ಮಸೂದ್ ಯಾವುದೇ ರಾಜಕೀಯ ಸಂಬಂಧ ಇಲ್ಲ ವ್ಯಕ್ತಿ. ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳುವ ಸೌಜನ್ಯ ತೋರಿಸಿಲ್ಲ, ಮಸೂದ್ ಕುಟುಂಬ ನನ್ನ ಗಮನಕ್ಕೆ ತಂದ ವಿಚಾರ ಪೊಲೀಸ್ ಗಮನಕ್ಕೆ ತರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.