LATEST NEWS
ಸ್ಯಾಟಲೈಟ್ ಕರೆ ಸಂಬಂಧ ಬೆಳ್ತಂಗಡಿಯಲ್ಲಿ ಓರ್ವನ ವಶಕ್ಕೆ ಪಡೆದ ಎನ್ಐಎ….?

ಸ್ಯಾಟಲೈಟ್ ಕರೆ ಸಂಬಂಧ ಬೆಳ್ತಂಗಡಿಯಲ್ಲಿ ಓರ್ವನ ವಶಕ್ಕೆ ಪಡೆದ ಎನ್ಐಎ….?
ಮಂಗಳೂರು ಅಗಸ್ಟ್ 19: ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ತನಿಖಾ ದಳ ಓರ್ವನನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿದೇಶಗಳಿಗೆ ನಿರ್ಬಂದಿತ ಸ್ಯಾಟಲೈಟ್ ಫೋನ್ ಮೂಲಕ ಕರೆಗಳು ಹೋಗಿರುವ ಹಿಂದೆ ಇದೀಗ ರಾಷ್ಟ್ರೀಯ ತನಿಖಾ ದಳ ಬಿದ್ದಿದೆ. ಬೆಳ್ತಂಗಡಿ ತಾಲೂಕಿನ ಗೋವಿಂದೂರು ಪರಿಸರದಲ್ಲಿ ನಿರಂತರವಾಗಿ ವಿದೇಶಗಳಿಗೆ ಕರೆ ಹೋಗುತ್ತಿರುವ ಮಾಹಿತಿಯನ್ನು ಕೇಂದ್ರೀಯ ಗುಪ್ತಚರ ಇಲಾಖೆ ಕಲೆ ಹಾಕಿದೆ. ಈ ಮಾಹಿತಿಯ ಮೇರೆಗೆ ರಾಷ್ಟ್ರೀಯ ತನಿಖಾ ದಳ ಬೆಳ್ತಂಗಡಿಯಲ್ಲಿ ತನ್ನ ತನಿಖೆಯನ್ನು ಮುಂದುವರಿಸಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಉಗ್ರ ಹೆಜ್ಜೆಗಳು ಮೂಡಿದೆಯೋ ಎನ್ನುವ ಸಂಶಯ ಮೂಡಲಾರಂಭಿಸಿದೆ. ಈ ಹಿಂದೆ ಮಂಗಳೂರಿನ ಉಳ್ಳಾಲದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಕೆಲವರನ್ನು ವಶಕ್ಕೆ ಪಡೆದಿತ್ತು.
ಈ ನಡುವೆ ಇದೀಗ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರಲ್ಲಿ ನಿರಂತರವಾಗಿ ವಿದೇಶಗಳಿಗೆ ಸ್ಯಾಟಲೈಟ್ ಫೋನ್ ಮೂಲಕ ಕರೆ ಹೋಗಿರುವ ಬೆಚ್ಚಿ ಬೀಳಿಸುವ ಮಾಹಿತಿ ಹೊರ ಬಿದ್ದಿದೆ.
ಸ್ಥಳೀಯ ಮಾಹಿತಿ ಪ್ರಕಾರ ಗೋವಿಂದೂರು, ಜಾರಿಗೆಬೈಲು, ನಾಳ ಮೊದಲಾದ ಗ್ರಾಮಗಳಲ್ಲಿ ಕೆಲವು ಮಸೀದಿಗಳು ಕಾರ್ಯಾಚರಿಸುತ್ತಿದ್ದು, ಈ ಮಸೀದಿಗಳಿಗೆ ಕೇರಳದಿಂದ ಹಲವು ಅಪರಿಚಿತ ವ್ಯಕ್ತಿಗಳು ಬರುತ್ತಿದ್ದಾರೆ. ಸ್ಥಳೀಯರಿಗೂ ಈ ವ್ಯಕ್ತಿಗಳ ಪರಿಚಯವಿಲ್ಲ. ಅಲ್ಲದೆ ಮಸೀದಿಗಳಲ್ಲಿ ನಿರಂತರ ಮೀಟಿಂಗ್ ಗಳನ್ನು ಮಾಡುತ್ತಿರುತ್ತಾರೆ ಎನ್ನುವ ಮಾಹಿತಿಯನ್ನು ಸ್ಥಳೀಯರು ನೀಡುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳ ಈಗಾಗಲೇ ಈ ಪ್ರದೇಶದಲ್ಲಿ ತನಿಖೆ ಕೈಗೊಂಡಿದ್ದು, ಒರ್ವ ವ್ಯಕ್ತಿಯನ್ನು ಈ ಸಂಬಂಧ ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಆದರೆ ಸ್ಥಳೀಯ ಪೊಲೀಸರಿಗೆ ಈ ಕುರಿತಂತೆ ಯಾವುದೇ ಮಾಹಿತಿಯನ್ನು ಎನ್ ಐಎ ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ, ಎನ್ ಐಎ ಅಧಿಕಾರಿಗಳು ಮಂಗಳೂರು ನಗರಕ್ಕೆ ಸಂಬಂಧಿಸಿದ ನಂಬಿಕಾರ್ಹ ಕೆಲವೇ ಕೆಲವು ಪೊಲೀಸ್ ರನ್ನು ಈ ತನಿಖೆ ಬಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ತನಿಖೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.