DAKSHINA KANNADA
ಇನ್ನೂ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಪತ್ತೆಗೆ ನೋಟಿಸ್ ಹೊರಡಿಸುವುದರಲ್ಲೇ ಇದೆ ಎನ್ಐಎ

ಪುತ್ತೂರು ಡಿಸೆಂಬರ್ 17: ದ.ಕ. ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳು ತಲೆಮರೆಸಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ ವಾಂಟೆಡ್ ನೋಟಿಸ್ ಹೊರಡಿಸಿದೆ. ಈಗಾಗಲೇ ಹಲವು ಬಾರಿ ನೊಟೀಸ್ ನೀಡಿದ್ದರೂ ಆರೋಪಿಗಳ ಪತ್ತೆ ಮಾತ್ರ ಸಾಧ್ಯವಾಗಲೇ ಇಲ್ಲ. ಇದು ಎನ್ಐಎ ತನಿಖೆ ಮಂದಗತಿಯಲ್ಲಿ ನಡೆಯುತ್ತಿದೆ ಎನ್ನುವುದಕ್ಕೆ ಪುರಾವೆ ಆಗಿದೆ.
ಈ ಕುರಿತು ಐಎನ್ಎ ತನ್ನ ಎಕ್ಸ್ ಖಾತೆಯಲ್ಲಿ ಆರೋಪಿಗಳ ಫೋಟೋ ಸಹಿತ ವಿವರಗಳನ್ನು ಪ್ರಕಟಿಸಿದೆ. ಆರೋಪಿಗಳು ಪತ್ತೆಯಾದಲ್ಲಿ ವಾಟ್ಸ್ಆ್ಯಪ್ ಅಥವಾ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದು, ಮಾಹಿತಿ ನೀಡಿದವರ ವಿವರ ಗೌಪ್ಯವಾಗಿ ಇರಿಸುವುದಾಗಿ ತಿಳಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಆರೋಪಿಗಳಾದ ಬೆಳ್ಳಾರೆ ಮುಸ್ತಫಾ, ಮಸೂದ್ ಅಗ್ನಾಡಿ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್‌ಪಾರೂಕ್ ಮತ್ತು ಅಬೂಬಕ್ಟರ್‌ಸಿದ್ದಿಕ್ ಪತ್ತೆಗೆ ಸೂಚನೆ ನೀಡಲಾಗಿದೆ. ತಲೆಮರೆಸಿರುವ ಈ ಎಲ್ಲ ಆರೋಪಿಗಳ ಪತ್ತೆಗೆ ಎನ್‌ಐಎ ತಂಡ ಮಾಹಿತಿ ಕಲೆ ಹಾಕುತ್ತಿದೆ. 2022 ಜು.26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿ ಈಗಾಗಲೇ 20 ಮಂದಿಯನ್ನು ಬಂಧಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಸೇರಿದಂತೆ ನಿಷೇಧಿತ ಪಿಎಫ್‌ಐ ಪ್ರಹಾಗೂ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ನಾಪತ್ತೆಯಾಗಿರುವ ಆರೋಪಿಗಳ ಪಟ್ಟಿಯನ್ನು ಹೆಸರಿಸಿದೆ. ಇದರಲ್ಲಿ ಕರ್ನಾಟಕದ ಐವರು ಸೇರಿ 24 ಮಂದಿ ಆರೋಪಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮೂವರು, ಕೇರಳದ 11, ಕರ್ನಾಟಕದ ಐವರು ಹಾಗೂ ತಮಿಳುನಾಡಿನ ಐವರು ನಾಪತ್ತೆಯಾಗಿರುವುದಾಗಿ ತಿಳಿಸಲಾಗಿದೆ. ಇವರಲ್ಲಿ ತಮಿಳುನಾಡಿನ ಐವರು ಕುಂಭಕೋಣಂ ರಾಮಲಿಂಗಂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ ಆರೋಪ ಹೊಂದಿದ್ದಾರೆ. ಕೇರಳ ಪಾಲಕ್ಕಾಡ್ ಶ್ರೀನಿವಾಸ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರಳದ ನಾಲ್ವರು ಆರೋಪಿ ಆರೋಪಿಗಗಳಾದ ಅಬ್ದುಲ್ ವಹಾಬ್, ಅಬ್ದುಲ್ ರಶೀದ್, ಆಯೂಬ್ ಹಾಗೂ ಮತ್ತೊರ್ವನನ್ನು ಹೆಸರಿಸಲಾಗಿದೆ. ಇವರೆಲ್ಲ ಪಿಎಫ್‌ಐಗೆ ನೇಮಕಗೊಂಡು, ಕೊಲೆಗೆ ಒಳಸಂಚು, ಸರ್ಕಾರದ ವಿರುದ್ಧ ಪಿತೂರಿ, ದೇಶದ ಸಮಗ್ರತೆ, ಏಕತೆಗೆ ದಕ್ಕೆ ತರಲು ಯತ್ನಿಸಿದ ಆರೋಪ ಇದೆ.