DAKSHINA KANNADA
ರಾಜ್ಯದಲ್ಲಿ ಸದ್ಯಕ್ಕೆ ಹೊಸ ವೈನ್ ಶಾಪ್ ಗಳಿಗೆ ಪರವಾನಗಿ ಕೊಡುವುದಿಲ್ಲ: ಸಚಿವ ಆರ್.ಬಿ.ತಿಮ್ಮಾಪುರ

ಪುತ್ತೂರು, ನವೆಂಬರ್ 30: ಅಬಕಾರಿ ಇಲಾಖೆಯ ಹಲವಾರು ವಿಚಾರಗಳ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.ಅತೀ ಶೀಘ್ರದಲ್ಲೇ ಈ ಬದಲಾವಣೆಗಳು ಜಾರಿಗೆ ಬರಲಿದೆ ಎಂದು ರಾಜ್ಯ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ಹೊಸ ವೈನ್ ಶಾಪ್ ಗಳಿಗೆ ಪರವಾನಗಿ ಕೊಡುವುದಿಲ್ಲ, ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಅನುದಾನಗಳು ಬರುತ್ತಿವೆ. ಅನುದಾನದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಪುತ್ತೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಸಚಿವ ತಿಮ್ಮಾಪುರ ಪ್ರತಿಕ್ರಿಯೆ ನೀಡಿದ್ದಾರೆ.
