KARNATAKA
ಸೈಬರ್ ವಂಚನೆಗೆ ಹೊಸ ಟೆಕ್ನಿಕ್ – ಫ್ರೀ ಆಗಿ ಸಿಕ್ಕಿ ಮೊಬೈಲ್ ಗೆ ಸಿಮ್ ಹಾಕಿದ್ದಷ್ಟೇ 2.80 ಕೋಟಿ ವಂಚಕರ ಪಾಲು
ಬೆಂಗಳೂರು, ಜನವರಿ 19: ಸೈಬರ್ ಕ್ರೈಂ ವಂಚಕರು ಇದೀಗ ಮತ್ತೊಂದು ವಂಚನೆಗೆ ಹೊಸ ಮಾರ್ಗ ಹುಡುಕಿದ್ದಾರೆ. ಡಿಜಿಟಲ್ ಅರೆಸ್ಟ್ ಸೇರಿದಂತೆ ವಿವಿಧ ಮಾರ್ಗಗಳ ಬಗ್ಗೆ ಜನರಲ್ಲಿ ಅರಿವು ಬರುತ್ತಿದ್ದಂತೆ ಇದೀಗ ಖತರ್ನಾಕ ಐಡಿಯಾ ಯೂಸ್ ಮಾಡಿದ್ದಾರೆ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ ಕಳಿಸಿ, ಅದರ ಮೂಲಕ ಸೈಬರ್ ವಂಚಕರು 2.80 ಕೋಟಿ ರೂ. ದೋಚಿದ್ದಾರೆ.
ಬೆಂಗಳೂರಿನ ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಮೊಬೈಲ್ ಕಳುಹಿಸಿದ್ದರು. ಗಿಫ್ಟ್ ಸ್ವೀಕರಿಸಿದ ಟೆಕ್ಕಿ ಸಿಮ್ನ್ನು ಮೊಬೈಲ್ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಅನ್ನು ಸೈಬರ್ ಖದೀಮರು ತಮ್ಮ ಖಾತೆಗೆ ಜಮಾವಣೆ ಮಡಿಕೊಂಡಿದ್ದಾರೆ.
ಸೈಬರ್ ವಂಚಕರು ಮೊಬೈಲ್ನಲ್ಲಿ ಮೊದಲೇ ಕೆಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದರು. ಟೆಕ್ಕಿ ಮೊಬೈಲ್ಗೆ ಸಿಮ್ ಹಾಕುತ್ತಿದ್ದಂತೆ, ಹಲವು ಸಂದೇಶಗಳು ಬಂದಿವೆ. ಈ ಮೊಬೈಲ್ಗೆ ಬರುವ ಸಂದೇಶಗಳು ಮತ್ತು ಒಟಿಪಿಗಳು ತಮಗೂ ಬರುವಂತೆ ವಂಚಕರು ಸೆಟ್ ಮಾಡಿದ್ದರು. ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದಾರೆ.
ನಂತರ ಟೆಕ್ಕಿಯ ಬ್ಯಾಂಕ್ ಅಕೌಂಟ್ ಸೇರಿ ಎಲ್ಲವನ್ನು ಪರಿಶೀಲಿಸಿದ್ದಾರೆ. ಕೊನೆಗೆ ಬ್ಯಾಂಕ್ ಎಫ್ಡಿಯಲ್ಲಿ ಇಟ್ಟಿದ್ದ 2.80 ರೂ. ಅನ್ನು ಖದೀಮರು ಎಗರಿಸಿದ್ದಾರೆ. ವೈಟ್ಫೀಲ್ಡ್ ಸೆನ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.