LATEST NEWS
ಪ್ರಯಾಣಿಕರ ಗಮನಕ್ಕೆ ಜುಲೈ 1 ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಲ್ಲಿ ಭಾರೀ ಬದಲಾವಣೆ

ದೆಹಲಿ ಜೂನ್ 12: ರೈಲ್ವೆಯಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಲು ಇದೀಗ ರೈಲ್ವೆ ಇಲಾಖೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬೇಕೆಂದರೆ IRCTC ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ಗೆ ಆಧಾರ್ ಲಿಂಕ್ ಆಗಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಇತ್ತೀಚೆಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವುದು ದೊಡ್ಡ ಸಾಹಸವೇ ಆಗಿತ್ತು, ಸಾಮಾನ್ಯ ಜನರಿಗೆ ತತ್ಕಾಲ್ ಟಿಕೆಟ್ ದೊರೆಯುವುದು ಅಸಾಧ್ಯವಾಗಿತ್ತು. ಈ ಹಿನ್ನಲೆ ಇದೀಗ ರೈಲ್ವೆ ಇಲಾಖೆ ಇನ್ನುಮುಂದೆ ಆಧಾರ್ ಲಿಂಕ್ ಹೊಂದಿರುವವರಿಗೆ ಮಾತ್ರ ತತ್ಕಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ನೀಡಿದೆ.

ಜೊತೆಗೆ ಏಜೆಂಟ್ಗಳ ಮೇಲೆ ಸಮಯದ ನಿರ್ಬಂಧ ಹೇರಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಈ ಹೊಸ ನಿಯಮ ಜುಲೈ 1ರಿಂದ ಭಾರತೀಯ ರೈಲ್ವೆಯ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವವರು ಆಧಾರ್ ದೃಢೀಕರಣ ಮಾಡಿಕೊಳ್ಳಬೇಕು ಎಂದು ಸಚಿವಾಲು ಹೇಳಿದೆ. ಜುಲೈ 15ರಿಂದ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ OTP ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. OTP ದೃಢೀಕರಣದ ನಂತರವೇ ಪಿಆರ್ ಎಸ್ ಕೌಂಟರ್ಗಳ ಮೂಲಕ ಬುಕ್ಕಿಂಗ್ ಮಾಡಲು ತತ್ಕಾಲ್ ಟಿಕೆಟ್ ಲಭ್ಯವಿರುತ್ತವೆ ಎಂದು ರೈಲ್ವೆ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.